ಪ್ರಣಾಮ್ ದೇವ , ಪ್ರತೀಕ್ ದೇವ ಕರಾಟೆಯಲ್ಲಿ ಚಾಂಪಿಯನ್

0

ಶೋಭೋಕಾನ್ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ರಿಜಿಸ್ಟ್ರಾರ್ ಆಫ್ ತಮಿಳುನಾಡು ಇದರ 18ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನ ಬ್ಲಾಕ್ ಬೆಲ್ಟ್ ನ ಹಿರಿಯ ವಿಭಾಗದಲ್ಲಿ ಪ್ರತೀಕ್ ದೇವ ಮತ್ತು ಕಿರಿಯ ವಿಭಾಗದಲ್ಲಿ ಪ್ರಣಾಮ್ ದೇವ ಎಲ್ಲ ವಿಭಾಗದಲ್ಲಿ ಗ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರತೀಕ್ ದೇವ ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಪಡೆಯುತಿದ್ದು ಪ್ರಣಾಮ್ ದೇವ ರಾಮಕುಂಜೇಶ್ವರ ಪಿ.ಯು ಕಾಲೇಜಿನಲ್ಲಿ ವಿದ್ಯಭ್ಯಾಸ ಪಡೆಯುತಿದ್ದಾರೆ. ಇವರು ಗುತ್ತಿಗಾರು ಪ್ರಕೃತಿ ಸ್ಟುಡಿಯೋದ ಮಾಲಕ ಶಿವರಾಮ ದೇವ ಮತ್ತು ಶ್ರೀಮತಿ ಯಶೋದಾ ಅವರ ಪುತ್ರರು. ಕನಕಮಜಲು ಚಂದ್ರಶೇಖರ ಅವರ ಶಿಷ್ಯರು.