ಕಾಯರ್ತೋಡಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

0


ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ದೇಲಂಪಾಡಿ ಗಣೇಶ್ ತಂತ್ರಿಯವರ ನೇತೃತ್ವದಲ್ಲಿ ಪುರುಷ ಸೂಕ್ತ ಹವನ, ವಿಷ್ಣು ಸಹಸ್ರ ನಾಮ ಹವನ, ತ್ರಿಕಾಲದಲ್ಲಿ ಅಷ್ಟವಧಾನ ಸಹಿತ ಭಗವತಿ ಸೇವೆ, ವನದುರ್ಗಾ ಹವನ ದ. ೧೩ರಂದು ನಡೆಯಿತು. ಇದರ ಪರಿಹಾರಾರ್ಥವಾಗಿ ಇಡಗುಂಜಿ ಮಹಾಗಣಪತಿ ದೇವಾಲಯ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ, ಶೃಂಗೇರಿ ದೇವಾಲಯ, ಕುಂಬ್ಳೆ ಗೋಪಾಲಕೃಷ್ಣ ದೇವಸ್ಥಾನ, ಅರಿಕ್ಕಾಡು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆಸಲಾಯಿತು.


ಅಲ್ಲದೆ ದೇವಾಲಯದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಹಿಂದಿನ ಚಪ್ಪರವನ್ನು ತೆಗೆದು ನೂತನವಾಗಿ ಚಪ್ಪರ ನಿರ್ಮಾಣ ಕಾರ್ಯಕ್ರಮ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎಕ.ಉಮೇಶ್, ಆರ್ಥಿಕ ಸಮಿತಿ ಸಂಚಾಲಕ ನಾರಾಯಣ ಕೇಕಡ್ಕ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಕುಸುಮಾಧರ ಎ.ಟಿ., ಕೋಶಾಧಿಕಾರಿ ಹರೀಶ್ ಉಬರಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಸೇವಾ ಸಮಿತಿ ಸಂಚಾಲಕ ನವೀನ ಕುದ್ಪಾಜೆ ಹಾಗೂ ಸದಸ್ಯರು ಊರ ಹಾಗೂ ಪರವೂರ ಭಕ್ತಾದಿಗಳು ಇದ್ದರು.