ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಯಲ್ಲಿ ಪೋಷಕರ ಕ್ರೀಡಾಕೂಟ

0

ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟವು ಡಿ.17ರಂದು ಸೈಂಟ್ ಜೋಸೆಫ್ ಸ್ಟೇಡಿಯಂನಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಪಾ ವಿಕ್ಟರ್ ಡಿಸೋಜ ಉದ್ಘಾಟಿಸಿದರು.
ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತಾ,ಪೋಷಕ ಸಮಿತಿಗಳ ಅಧ್ಯಕ್ಷರುಗಳಾದ ಹರೀಶ್ ರಾವ್ ಕಣಿಪಿಲ,ದುರ್ಗಾಪ್ರಸಾದ್ ಕೆ ಬಿ,ಅನುರಾಧ ಕುರುಂಜಿ, ಸೈಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ,ಶಿಕ್ಷಕಿ ಶ್ರೀಮತಿ ವಿಧ್ಯಾಸರಸ್ವತಿ ಸ್ವಾಗತಿಸಿ,ಶಿಕ್ಷಕಿ
ಶ್ರೀಮತಿ ಮಮತಾ ಉಪಸ್ಥಿತರಿದ್ದರು.


ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ,ಶಿಕ್ಷಕಿ ಪುಷ್ಪಾವೇಣಿ ಕ್ರೀಡಾಕೂಟ ನಡೆಸಿ ಕೊಟ್ಟರು.
ಪೋಷಕರಿಗೆ ಲಕ್ಕಿ ಗೇಮ್,ಹಗ್ಗಜಗ್ಗಾಟ, ವಾಲಿಬಾಲ್,ತೋಬಾಲ್ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ , ಶಾಲಾ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.