ಮೀನು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿ ಭಾರತ- ಒಳನಾಡು ಮೀನುಗಾರಿಕೆಗೆ ವಿಫುಲ ಅವಕಾಶ: ಕೃಷಿ ಮೇಳದಲ್ಲಿ ಒಳನಾಡು ಮೀನುಗಾರಿಕೆ ವಿಚಾರ ಸಂಕಿರಣ

0

ಮೀನು ಅತ್ಯಂತ ಉತ್ಕೃಷ್ಟ ಆಹಾರ ಮತ್ತು ದೇಶದ ದೊಡ್ಡ ಆರ್ಥಿಕ ಮೂಲ. ಮೀನು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ‌ ಸ್ಥಾನದಲ್ಲಿ ಇದೆ. ಒಳನಾಡು ಮೀನುಗಾರಿಕೆಗೆ ದೇಶದಲ್ಲಿ ವಿಪುಲ ಅವಕಾಶ ಇದೆ ಎಂದು ಸುಳ್ಯದಲ್ಲಿ ನಡೆಯುತ್ತಿರುವ ಪಯಸ್ವಿನಿ ಕೃಷಿ ಮೇಳದಲ್ಲಿ ನಡೆದ‌ ‘ಒಳನಾಡು ಮೀನುಗಾರಿಕೆ’ ಕಾರ್ಯಾಗಾರದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಶಸ್ತಿ ವಿಜೇತ ಕೃಷಿಕ ರಮೇಶ್ ಎಂ.ಆರ್. ಮಾತನಾಡಿ ದೇಶದಲ್ಲಿ 10 ಲಕ್ಷ ಟನ್ ಮೀನು ಉತ್ಪಾದಿಸಲಾಗುತಿದೆ. ಇದರಲ್ಲಿ 6 ಲಕ್ಷ ಟನ್ ಸಮುದ್ರ ಮೀನು ಹಾಗು 4 ಲಕ್ಷ ಟನ್ ಒಳನಾಡು ಮೀನು ಉತ್ಪಾದನೆ ಮಾಡಲಾಗುತಿದೆ. ಮೀನುಗಾರಿಕೆಯಿಂದ 5 ಲಕ್ಷ ಕೋಟಿ ಆರ್ಥಿಕ ಮೂಲ ಇದೆ. 50 ಸಾವಿರ ಕೋಟಿ ವಿದೇಶ ವಿನಿಮಯ ಬರುತ್ತದೆ. ಮೀನಿಗೆ ಬಾರೀ ಬೇಡಿಕೆ ಇದ್ದು ಉತ್ಪಾದನೆಗೆ ವಿಫುಲ ಅವಕಾಶ ಇದೆ. ಅತಿ ಕಡಿಮೆ ಸ್ಥಳದಲ್ಲಿ ನಮ್ಮ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ಒಳನಾಡು ಮೀನು ಉತ್ಪಾದನೆ‌ ಮಾಡಬಹುದು ಎಂದು ಅವರು ಹೇಳಿದರು.‌ ಮಂಗಳೂರು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಮಹಶೀರ್ ಮತ್ಸ್ಯ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಸಂತೋಷ್ ಕುಮಾರ್ ಶೆಟ್ಟಿ ಮಂಗಳೂರು, ಚಂದ್ರಹಾಸ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಮೇಳದ ಸಂಯೋಜಕ ರಂಜಿತ್ ಅಡ್ತಲೆ ಸ್ವಾಗತಿಸಿದರು. ದಿನೇಶ್ ಮಡಪ್ಪಾಡಿ, ಸುಶ್ಮಿತಾ ಜಾಕೆ, ಮಧುರಾ ಎಂ.ಆರ್.ಕಾರ್ಯಕ್ರಮ ನಿರೂಪಿಸಿದರು.