ತಹಶೀಲ್ದಾರ್ ಹೆಸರು ಹೇಳಿಕೊಂಡು ಹಣ ವಸೂಲಿ, ಎಚ್ಚರಿಕೆ ನೀಡಿದ ತಹಶೀಲ್ದಾರ್ ಅನಿತಾಲಕ್ಷ್ಮೀ

0

ಸುಳ್ಯದ ತಹಶೀಲ್ದಾರ್ ರ ಹೆಸರು ಬಳಸಿಕೊಂಡು‌ ಕಂದಾಯ ಇಲಾಖೆಯ ಕೆಲ ಸಿಬ್ಬಂದಿಗಳು ಹಣ ವಸೂಲಿ‌ ಮಾಡುತ್ತಿದ್ದಾರೆಂಬ ದೂರು‌ ಬಂದಿರುವ ಹಿನ್ನಲೆಯಲ್ಲಿ ತಹಶೀಲ್ದಾರ್ ಅನಿತಾಲಕ್ಷ್ಮಿಯವರು ಸಿಬ್ಬಂದಿಗಳ ಸಭೆ ‌ಕರೆದು ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

ತಹಶೀಲ್ದಾರ್‌ರ ಹೆಸರು ಹೇಳಿಕೊಂಡು ಕಚೇರಿಯ ಕೆಲ ಸಿಬ್ಬಂದಿಗಳು ಸಾರ್ವಜನಿಕವಾಗಿ ಹಣ ಪಡೆಯುತ್ತಿದ್ದಾರೆಂಬ ಸುದ್ದಿ ಇತ್ತೀಚೆಗೆ ವೆಬ್‌ಸೈಟ್‌ಗಳಲ್ಲಿ ಸುದ್ದಿಯಾಗಿತ್ತು.

ಈ ಕುರಿತು ವರದಿಗಾರರೊಂದಿಗೆ ಬೇಸರ ವ್ಯಕ್ತಪಡಿಸಿದ್ದ ತಹಶೀಲ್ದಾರ್‌ರವರು ತನ್ನ ಹೆಸರು ಹೇಳಿಕೊಂಡು ನಮ್ಮ ಕಚೇರಿಯ ಕೆಲವು ಸಿಬ್ಬಂದಿಗಳು ಸಾರ್ವಜನಿಕರಿಂದ ಹಣ ಪಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಈಗಾಗಲೇ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದು, ಯಾರಾದರೂ ಸಾರ್ವಜನಿಕರು ಆ ರೀತಿಯಲ್ಲಿ ವಂಚನೆಗೊಂಡಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.