ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ, ಕುಮಾರ್ ನಾಯರ್ ಸಂಸ್ಮರಣೆ: ಸ್ಮರಣ ಸಂಚಿಕೆ ಬಿಡುಗಡೆ, ಕುಮಾರ ಸ್ವಾಮಿ ವಿದ್ಯಾಲಯ ಮಹಾ ವೃಕ್ಷ: ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

0

ಕುಮಾರ ನಾಯರ್ ಅವರೊಂದು ವೃಕ್ಷ ನೆಟ್ಟರು. ಅವರ ಸುಮಧುರ ಗುಣ ಅವರ ಪುತ್ರರೂ ಹೊಂದಿರುವ ಕಾರಣ ಕುಮಾರಸ್ವಾಮಿ ವಿದ್ಯಾಲಯ ಬೃಹತ್‌ ವೃಕ್ಷದಂತೆ ಬೆಳೆಯಲು ಕಾರಣವಾಯಿತು ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಕುಕ್ಕೆ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ನಿಂದ ಪ್ರವರ್ತಿತವಾಗಿರುವ ಕುಮಾರಸ್ವಾಮಿ ವಿದ್ಯಾಲಯದ ರಜತ ಸಂಭ್ರಮ ಕಾರ್ಯಕ್ರಮ ಕುಮಾರ ಪರ್ವ -2022 ಪರ್ವದ ಎರಡನೇ ದಿನವಾದ ಸಂಸ್ಮರಣ ಕಾರ್ಯಕ್ರಮದಲ್ಲಿ‌ ಅವರು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಜೀವನ ಮತ್ತು ಮನುಷ್ಯತ್ವ ರೂಪಿಸಲು ಶಿಕ್ಷಣ ಅಗತ್ಯವಿದೆ. ಮನುಷ್ಯನ ಎಲ್ಲಾ ಅಂಗಾಂಗಗಳು ಉಪಯೋಗಕ್ಕೆ ಬೀಳದ ಸಂದರ್ಭ ಬರುವ ಮುಂಚೆಯೇ ಸಾರ್ಥಕ ಬದುಕು ನಮ್ಮದಾಗಬೇಕು. ಸಾರ್ಥಕ ಬದುಕು ನಿರ್ಮಾಣದಲ್ಲಿ ಈ ಸಂಸ್ಥೆ ಸುಬ್ರಹ್ಮಣ್ಯಕ್ಕೆ ಇನ್ನಷ್ಟು ದೊಡ್ಡ ಕೊಡುಗೆ ಕೊಡಲಿದೆ ಎಂದು ಅವರು ನುಡಿದರು.

ಕುಮಾರ ಪರ್ವ ಸ್ಮರಣ ಸಂಚಿಕೆಯನ್ನು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ‌ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕೆ. ಸೀತಾರಾಮ ರೈ ಪುಸ್ತಕದ ಮಂಟಪ ಅನಾವರಣ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕುಮಾರ ನಾಯರ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಪಿ.ಬಿ.ಹರೀಶ್ ರೈ ಕುಮಾರ ನಾಯರ್ ಕುರಿತು ಸಂಸ್ಮರಣಾ ಮಾತುಗಳನ್ನಾಡಿದರು. ಸುಬ್ರಹ್ಮಣ್ಯಕ್ಕೆ ಗಣನೀಯ ಕೊಡುಗೆ ನೀಡಿದ ಅವರ ಹೆಸರನ್ನು ಸುಬ್ರಹ್ಮಣ್ಯದ ಯಾವುದಾದರೂ ರಸ್ತೆಗೆ ನಾಮಕರಣ ಮಾಡಲು ಸ್ಥಳೀಯಾಡಳಿತ ಮನಸ್ಸು ಮಾಡಬೇಕು ಎಂದವರು ಹೇಳಿದರು.
.
ಸ್ಮರಣ ಸಂಚಿಕೆ ಸಂಪಾದಕ ದುರ್ಗಾಕುಮಾರ್ ನಾಯರ್ ಕೆರೆ ಸಂಚಿಕೆ ಕುರಿತು ಮಾತನಾಡಿದರು.

ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್., ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ಎನ್.ಕೆ., ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಏನೆಕಲ್, ಸಂಸ್ಥೆಯ ಸಿ.ಎ. ನರೇಂದ್ರ ಪೈ, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಎಚ್., ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಸಂಕೀರ್ತ್ ಹೆಬ್ಬಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಸಾದ್ ಮುನಿಯಂಗಳ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ। ಜಿತೇಶ್, ರವಿ ಕಕ್ಕೆಪದವು, ಶಿಕ್ಷಕ ಉಮೇಶ್ ಶೆಟ್ಟಿ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವರಾಮ ಏನೆಕಲ್ಲು ಸ್ವಾಗತಿಸಿದರು. ಶರ್ಮದಾ ವಂದಿಸಿದರು. ವಿದ್ಯಾರ್ಥಿಗಳಾದ ಅದಿತಿ, ಮಹತಿ ಮತ್ತು ಬಿಂದು
ಕಾರ್ಯಕ್ರಮ ನಿರೂಪಿಸಿದರು. ನಿವೇದ್ಯ ಅವರು ಸ್ಮರಣ ಸಂಚಿಕೆಯಲ್ಲಿರುವ ಕುಮಾರ್ ನಾಯರ್ ಕುರಿತಾದ ಗಣ್ಯರ ಒಡನಾಟದ ಬರಹಗಳನ್ನು ಪ್ರಸ್ತುತಪಡಿಸಿದರು.