ಯಾದವ ಸಭಾ ತಾಲೂಕು ಸಮಿತಿ ವತಿಯಿಂದ ಕ್ರೀಡೋತ್ಸವ

0


ಯಾದವ ಸಭಾ ತಾಲೂಕು ಸಮಿತಿ ಸುಳ್ಯ ಇದರ ವತಿಯಿಂದ ಡಿ. ೨೫ರಂದು ನಡೆಯುವ ಯಾದವ ಸಮಾವೇಶದ ಪ್ರಯುಕ್ತ ಡಿ. ೧೮ರಂದು ಕ್ರೀಡೋತ್ಸವವು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಮೈದಾನದಲ್ಲಿ ನಡೆಯಿತು.


ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ನಿಕಟ ಪೂರ್ವಾಧ್ಯಕ್ಷ ಮಧುಸೂದನ ಆಯರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಾದವ ಸಭಾ ತಾಲೂಕು ಸಮಿತಿ ಸುಳ್ಯ ಇದರ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದವ ಸಭಾ ತಾಲೂಕು ಸಮಿತಿ ಸುಳ್ಯದ ಮಾಜಿ ಅಧ್ಯಕ್ಷ ಕೊರಗಪ್ಪ ಮಾಸ್ತರ್ ಕಣಕ್ಕೂರು, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಯಾದವ ಸಭಾ ತಾ. ಸಮಿತಿ ಸುಳ್ಯ ಇದರ ಕಾರ್ಯದರ್ಶಿ ಕೃಷ್ಣ ಬೆಟ್ಟ, ಉಪಾಧ್ಯಕ್ಷ ಕೃಷ್ಣ ಅಕ್ಕಪ್ಪಾಡಿ, ತಾ.ಮಹಿಳಾ ವೇದಿಕೆ ಅಧ್ಯಕ್ಷೆ ರಾಜೀವಿ ಪರ್ಲಿಕಜೆ ಉಪಸ್ಥಿತರಿದ್ದರು.
ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಸ್ವಾಗತಿಸಿ, ಸಾವಿತ್ರಿ ಕಣೆಮರಡ್ಕ ವಂದಿಸಿದರು. ತೀರ್ಥೇಶ್ ದುಗಲಡ್ಕ ಕಾರ್ಯಕ್ರಮ ನಿರೂಪಿಸಿದರು. ನಂತರ ಯುವ ವೇದಿಕೆಯ ವತಿಯಿಂದ ಟೀ ಶರ್ಟ್ ಬಿಡುಗಡೆಗೊಳಿಸಲಾಯಿತು.