ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಆಗಮನ ಹಿನ್ನೆಲೆ ಕೋಟೆಮುಂಡುಗಾರಿನಲ್ಲಿ ಪೂರ್ವಭಾವಿ ಸಭೆ

0

ಆದಿ ಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಸುಳ್ಯ ತಾಲೂಕು ಭೇಟಿ ನೀಡಲಿದ್ದು ಕಳಂಜ ಗ್ರಾಮದ ಚೆನ್ನಪ್ಪ ಗೌಡ ಕಜೆಮೂಲೆ ಅವರ ಮನೆಗೆ ಡಿ.21ರಂದು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ. 15 ರಂದು ಕೋಟೆಮುಂಡುಗಾರಿನ ಕಳಂಜ ಬಾಳಿಲ ಸೊಸೈಟಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ವೇದಿಕೆಯಲ್ಲಿ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರು, ಕಾರ್ಯದರ್ಶಿ ಬೆಳ್ಯಪ್ಪ ಗೌಡ, ವಲಯ ನಿರ್ದೇಶಕ ಕೂಸಪ್ಪ ಗೌಡ, ಕಳಂಜ ಗ್ರಾಮ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ರುಕ್ಮಯ್ಯ ಗೌಡ, ಕಾರ್ಯದರ್ಶಿ ಮೇದಪ್ಪ ಗೌಡ ತಂಟೆಪ್ಪಾಡಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ವೆಂಕಟರಮಣ ಗೌಡ, ಕೌಶಿಕ್ ಕೊಡಪಾಲ, ಈಶ್ವರ ಗೌಡ ಕಜೆಮೂಲೆ, ಜನಾರ್ಧನ ಕೊಲೆಂಜಿಕೋಡಿ, ಮಾಧವ ಗೌಡ ಕಳಂಜ, ನೀಲಪ್ಪ ಗೌಡ, ತೀರ್ಥರಾಮ ಮಣಿಮಜಲು, ಬಾಳಪ್ಪ ಗೌಡ, ಶಿವರಾಮ ಕಜಮೂಲೆ, ಒಡ್ಯಪ್ಪಗೌಡ, ಶೇಷಪ್ಪ ಗೌಡ ಕಳಂಜ, ಬಾಲಕೃಷ್ಣ ಬೇರಿಕೆ, ತಿಲಕ ಟಿ, ಲೋಕೇಶ್ ತಂಟೆಪ್ಪಾಡಿ, ಯೋಗಿತಾ ಕಜೆಮೂಲೆ, ಕುಶಾಲಪ್ಪ ಗೌಡ ಮಣಿಮಜಲು, ಕಜೆಮೂಲೆ ಕೆ ವಿ ಗೌಡ, ಗಂಗಾಧರ ಗೌಡ ಕಾಯರ, ಶೇಖರ್ ಕೆ.ಪಿ, ಅನಿಲ್ ಪೂಜಾರಿ ಮನೆ, ಮಧುರಾಜ್ ಎನ್ ಬಿ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.