ಆಲೆಟ್ಟಿ ಗುಂಡ್ಯ ಜಂಕ್ಷನ್ ನಲ್ಲಿ ಭಗವಧ್ವಜ ಕಟ್ಟೆ ಮತ್ತು ನಾಮಫಲಕದ ಉದ್ಘಾಟನೆ

0

ಆಲೆಟ್ಟಿಯ ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನ, ವಯನಾಟ್ ಕುಲವನ್ ದೈವಸ್ಥಾನ ಮತ್ತು ಮಹಮ್ಮಾಯಿ ದೇವಸ್ಥಾನ ಕ್ಕೆ ಸಂಚರಿಸುವ ಗುಂಡ್ಯ ರಸ್ತೆಯ ಜಂಕ್ಷನ್ ನಲ್ಲಿ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ರವರು ನಿರ್ಮಿಸಿದ ಭಗವಧ್ವಜ ಕಟ್ಟೆ ಮತ್ತು ನೂತನ ನಾಮಫಲಕದ ಅನಾವರಣ ಮಾಡಲಾಯಿತು.


ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ರವರು ನೂತನ ಕಟ್ಟೆಯಲ್ಲಿ ಭಗವದ್ವಜಾರೋಹಣಗೈದರು. ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅದ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಮುಖಂಡರಾದ ಎನ್.ಎ.ರಾಮಚಂದ್ರ,
ಜಯಪ್ರಕಾಶ್ ಕುಂಚಡ್ಕ,
ಕೃಪಾಶಂಕರ ತುದಿಯಡ್ಕ, ಶ್ರೀಪತಿ ಭಟ್ ಮಜಿಗುಂಡಿ, ಸುಧಾಕರ ಆಲೆಟ್ಟಿ, ವೆಂಕಟ್ ವಳಲಂಬೆ, ಸುನಿಲ್ ಕೇರ್ಪಳ,ಪ್ರದೀಪ್ ಕೊಲ್ಲರಮೂಲೆ,ಸುಧಾಕರ ಬೆಳ್ಳೂರು,
ಪಂ.ಸದಸ್ಯರಾದ ಶಿವಾನಂದ ರಂಗತ್ತಮಲೆ, ಕಮಲ ನಾಗಪಟ್ಟಣ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ, ಪದಾಧಿಕಾರಿಗಳಾದ ನಿತಿನ್ ಗುಂಡ್ಯ, ಸಚಿನ್ ಗುಂಡ್ಯ ,ಮಹೇಶ್ ಕುತ್ಯಾಳ, ವಿಷ್ಣುಪ್ರಸಾದ್ ಗುಂಡ್ಯ, ರಾಧಾಕೃಷ್ಣ ಗುಂಡ್ಯ, ಜಯಪ್ರಕಾಶ್ ನೆಡ್ಚಿಲು ಮತ್ತಿತರರು ಉಪಸ್ಥಿತರಿದ್ದರು.