ಐವರ್ನಾಡಿನಲ್ಲಿ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ,ಭಕ್ತಿಗೀತೆ ಬಿಡುಗಡೆ

0

ಐವರ್ನಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮವು ನರ್ಸರಿ 65, ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ವಠಾರದಲ್ಲಿ ಡಿ.18 ರಂದು ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಸಭಾಧ್ಯಕ್ಷತೆ ವಹಿಸಿದ್ದರು.


ಉದ್ಯಾನವನ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಾಯಿಗೀತ ಜ್ಞಾನೇಶ್ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಜ್ಯೋತಿಷಿ ಭೀಮರಾವ್ ವಾಷ್ಟರ್, ಸಾಹಿತಿ ನಿರಂಜನ ಕಡ್ಲಾರ್, ತಮಿಳು ಕಲಾವಿದರ ವೇದಿಕೆ ಅಧ್ಯಕ್ಷ ಕಣ್ಣದಾಸನ್, ಗುರುಸ್ವಾಮಿ ಕರುಣಾಕರ,ಧನೇಂದ್ರ ಗುರುಸ್ವಾಮಿ,ಶ್ರೀಮತಿ ಸಾಯಿಪ್ರಸನ್ನ,ಮರ್ದಾಳದ ಹೋಟೆಲ್ ಮಾಲಕ ರಾಮಮೂರ್ತಿ ಉಪಸ್ಥಿತರಿದ್ದರು.


ಜ್ಯೋತಿಷಿ,ಖ್ಯಾತ ಗಾಯಕ ಭೀಮರಾವ್ ವಾಷ್ಟರ್, ಗಡಿನಾಡ ಗಾಯಕ ವಸಂತ ಬಾರಡ್ಕ, ಮಣಿ ಸೌಂಡ್ಸ್ ನ ಕುಮಾರರವರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರು ಹಾಡಿರುವ ಸಿರಿಗೆರೆಯ ಅಯ್ಯಪ್ಪ ಸ್ವಾಮಿ, ವಸಂತ ಬಾರಡ್ಕರವರ ಕಲಿಯುಗ ವರದ ಶ್ರೀ ಅಯ್ಯಪ್ಪ ಕನ್ನಡ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು.


ಕು.ಶ್ರೇಯ ಪ್ರಾರ್ಥಿಸಿ,ಪರಿಮಳ ಸದಾನಂದ ಸ್ವಾಗತಿಸಿ,ಪೆರುಮಾಳ್ ಲಕ್ಷ್ಮಣ್ ಪ್ರಾಸ್ತಾವಿಕ ಮಾತನಾಡಿದರು.
ಉಪನ್ಯಾಸಕಿ ಜ್ಯೋತಿಲಕ್ಷ್ಮಿ ಸಂದೇಶ ವಾಚಿಸಿದರು.
ಶಕುಂತಳಾ ಮತ್ತು ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿ,ದಯಾಳನ್ ವಂದಿಸಿದರು.
ಶ್ರೀಮತಿ ಶಾಂತಿ ಪೆರುಮಾಳ್ ಲಕ್ಷ್ಮಣ್ ಮತ್ತು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೆಳಿಗ್ಗೆ ಸ್ಥಳ ಶುದ್ಧೀಕರಣ,ಅಯ್ಯಪ್ಪ ಭಕ್ತವೃಂದ ಮತ್ತು ಆರ್.ಪಿ.ಕ್ರಿಯೇಷನ್ಸ್ ಇವರಿಂದ ಭಜನೆ ನಡೆಯಿತು.ನಂತರ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು.ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.