ಐವರ್ನಾಡು : ಅಜ್ಜಮೂಲೆ ಶ್ರೀ ಧರ್ಮದೈವ ಮತ್ತು ಸಪರಿವಾರ ದೈವಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಐವರ್ನಾಡು ಗ್ರಾಮದ ಅಜ್ಜಮೂಲೆಯ ಆದಿದ್ರಾವಿಡ ಕಾಲನಿಯಲ್ಲಿ ಶ್ರೀ ಧರ್ಮದೈವ ಮತ್ತು ಸಪರಿವಾರ ದೈವ
ಸಾನಿಧ್ಯಗಳ ಬ್ರಹ್ಮಕಲಶೋತ್ಸವವು ಮಾ.06 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ .18 ರಂದು ನಡೆಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಅಧ್ಯಕ್ಷರಾದ ದೇವಿಪ್ರಸಾದ್ ಕೊಪ್ಪತಡ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಸ್ ಎನ್ ಮನ್ಮಥ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಪುಷ್ಪಾವತಿ ಬಾಳಿಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕು | ಭಾಗೀರಥಿ, ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ ಪವಿತ್ರಮಜಲು, ರಾಮಕೃಷ್ಣ ಭಟ್ ಅಜ್ಜಮೂಲೆ, ಸುದೇಷ್ಣ ದೇರಾಜೆ, ಬಾಲಕೃಷ್ಣ ಬೊಳ್ಳೂರು, ಬಿ. ಕೆ. ಧರ್ಮಪಾಲ ಶೇಣಿ, ದಿನೇಶ ಚೂಂತಾರು, ಲಿಂಗಪ್ಪ ಚೂಂತಾರು, ಶಿವಪ್ಪ ಕೊಡ್ತಿಲು, ಕರಿಯಪ್ಪ ಕೋಡ್ತಿಲು, ಗ್ರಾಮ ಪಂಚಾಯತ್ ಸದಸ್ಯೆಯಾದ ನಳಿನಿ ಕೋಡ್ತಿಲು, ಯಶವಂತ ಬಾರೆತಡ್ಕ ಹಾಗೂ ಅಜ್ಜಮೂಲೆ ಕಾಲನಿಯ ಸಮಸ್ತರು ಮತ್ತು ಊರವರು ಉಪಸ್ಥಿತರಿದ್ದರು.