ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮೂಹಿಕ ಯೋಗ-ಷಣ್ಮುಖ ನಮಸ್ಕಾರ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿ ವತಿಯಿಂದ ಡಿ.18 ರಂದು ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಂಜಾನೆ ಗಂಟೆ 4 ರಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 3000 ಕ್ಕೂ ಅಧಿಕ ಯೋಗಪಟುಗಳು, ಕೇರಳದ 270 ಯೋಗಪಟುಗಳು ವಿಶಾಲವಾದ ದೇವಳದ ರಥ ಬೀದಿಯಲ್ಲಿ ಷಣ್ಮುಖ ನಮಸ್ಕಾರ ಪ್ರದರ್ಶನ ಮಾಡಿದರು. ಬೆಳಗ್ಗೆ 5 ಗಂಟೆಗೆ ಆರಂಭವಾದ ಕಾರ್ಯಕ್ರಮ 7 ಗಂಟೆವರೆಗೆ ನಡೆಯಿತು.


ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರದ ಮಹತ್ವವನ್ನು ದಯಾನಂದ ಕಟೀಲು ತಿಳಿಸಿದರು. 3 ಹಂತದಲ್ಲಿ 6 ಸುತ್ತು ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮ ಶಿಕ್ಷಣ ಪ್ರಮುಖ ಹರೀಶ್ ಅಂಚನ್ ಸುರತ್ಕಲ್ ಅವರ ಮಾರ್ಗದರ್ಶನದೊಂದಿಗೆ, ತಾಲೂಕು ಶಿಕ್ಷಣ ಪ್ರಮುಖ ಗಣೇಶ ಸುವರ್ಣ ನೇತೃತ್ವದಲ್ಲಿ ನಡೆಯಿತು.
ಮುಂಜಾನೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನ ಮಾಡಿ ರಥ ಬೀದಿಯಲ್ಲಿ ಸಾಲಾಗಿ ಕುಳಿತು ತನ್ಮಯತೆಯಿಂದ ಯೋಗ ನಮಸ್ಕಾರದಲ್ಲಿ ಸದಸ್ಯರು ಭಾಗವಹಿಸಿದರು.


ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಮಾಸ್ಟರ್ ಪ್ಲಾನರಿ ಸದಸ್ಯ ಮನೋಜ್ ಕುಮಾರ್, ರಾಘವೇಂದ್ರ ಪ್ರಭು, ಎಸ್.ಪಿ.ವೈ.ಎಸ್.ಎಸ್ ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್, ಹರೀಶ್ ಕೋಟ್ಯಾನ್, ಪ್ರಾಂತ ಪ್ರತಿನಿಧಿ ಶಿವಾನಂದ ರೈ, ಜಿಲ್ಲಾ ಸಂಚಾಲಕ ಜಯರಾಮ ಉಪಸ್ಥಿತರಿದ್ದರು. ವಲಯ ಸಂಯೋಜಕರಾದ ಅಶೋಕ ಕುಮಾರ್ ಜೈನ್, ವಲಯ ಸಂಚಾಲಕರಾದ ಗೋಕುಲ್ ನಾಥ್ ಶೆಣೈ , ಕನಕ ಅಮೀನ್, ನಾರಾಯಣ ಶಬರಾಯ, ಲಕ್ಷ್ಮೀನಾರಾಯಣ, ಪ್ರತಾಪ್ ರಾವ್ , ಶಿವಪ್ರಸಾದ್, ಲೋಕೇಶ ಪೊಳಲಿ, ತಾರಾ ಸುರತ್ಕಲ್,ಗೀತಾ ಶೆಟ್ಟಿ, ಶುಭಾ ಕಾವೂರು, ಲಲನ್ ಕುಮಾರ್, ಈಶ್ವರ ಕೊಟ್ಟಾರಿ, ಪ್ರಶಾಂತ್ ಉಳ್ಳಾಲ, ಉದಯ ಅಮ್ಮಣ್ಣಾಯ, ನಾಗರಾಜ್, ಲೀಲಾವತಿ ಸುರತ್ಕಲ್, ವೆಂಕಟೇಶ್, ಸುಲತಾ ಪುತ್ತೂರು, ಯೋಗಿಶ್ ಆಚಾರ್ಯ, ನಯನಾ ಬಿ.ಸಿ ರೋಡ್, ಜಯಶ್ರೀ ಸುಬ್ರಹ್ಮಣ್ಯ, ಶ್ರೀ ಕುಮಾರ್, ಪಿ.ಎಸ್ ಶರ್ಮ ಇನ್ನಿತರರು ಭಾಗವಹಿಸಿದ್ದರು. ರೂಪ ಬೆಂಗಳೂರು ನಿರೂಪಿಸಿದರು. ಪ್ರಭಾಕರ ಸುಬ್ರಹ್ಮಣ್ಯ ವಂದಿಸಿದರು.
ಡಿ.17 ರ ರಾತ್ರಿ ನೂರಾರು ಯೋಗಪಟುಗಳು ಸುಬ್ರಹ್ಮಣ್ಯ ದೇವಸ್ಥಾನದ ರಥಬಿದಿಯೂ ಸೇರಿದಂತೆ ಕುಮಾರಧಾರ ನದಿ ತಟದವರೆಗೆ ಸ್ವಚ್ಚತಾಕಾರ್ಯ ನಡೆಸಿದರು.