ಐವರ್ನಾಡು ದೇವಸ್ಥಾನದಲ್ಲಿ ಮಂಜುಶ್ರೀ ಸಿಂಗಾರಿ ಮೇಳದ ರಂಗಪ್ರವೇಶ

0

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಇದರ ಆಶ್ರಯದಲ್ಲಿ ಮಂಜುಶ್ರೀ ಸಿಂಗಾರಿ ಮೇಳದ ರಂಗಪ್ರವೇಶವು ಡಿ.18 ರಂದು ಸಂಜೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಅರ್ಚಕ ಪದ್ಮನಾಭ ಭಟ್ ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ದರ್ಖಾಸ್ತು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ದೇವಸ್ಥಾನದ ವ್ಯ.ಸ.ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ಡಾ.ಬಾಲಸುಬ್ರಹ್ಮಣ್ಯ ಭಟ್ , ಸದಸ್ಯೆ ಶ್ರೀಮತಿ ತಾರಾ ರಾಜರಾಮ ರಾವ್ ,ಕೇರಳ ಸಿಂಗಾರಿ ಮೇಳದ ತರಬೇತುದಾರ ಚಂದ್ರನ್ ಕಡಕಂ ಉಪಸ್ಥಿತರಿದ್ದರು.
ಸನ್ಮಾನ
ತರಬೇತಿ ನೀಡಿದ
ತರಬೇತುದಾರ ಚಂದ್ರನ್ ಕಡಕಂ ದಂಪತಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು.
ಜಯಪ್ರಸಾದ್ ಕಜೆತ್ತಡ್ಕ ವಂದಿಸಿ, ಹರೀಶ್ ರಾವ್ ಉದ್ದಂಪಾಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.
ಮಂಜುಶ್ರೀ ಗೆಳೆಯರ ಬಳಗದ ಎಲ್ಲಾ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.