ಪಂಚಾಯತ್ ಪ್ರತಿನಿಧಿಗಳ ಗೌರವಧನ ಹೆಚ್ಚಳ, ಮಂಜುನಾಥ ಭಂಡಾರಿ ಅವರ ಶ್ರಮ – ಸಚಿನ್ ರಾಜ್ ಶೆಟ್ಟಿ

0

ವಿಧಾನ ಪರಿಷತ್ ಗೆ ಆಯ್ಕೆ ಯಾದ ಮಂಜುನಾಥ ಭಂಡಾರಿ ಅವರು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸಲು ವಿಧಾನ ಪರಿಷತ್ ಹಾಗೂ ನಿಯೋಗ ದ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ ಪರಿಣಾಮ ಇದೀಗ ಪಂಚಾಯತ್ ಅಧ್ಯಕ್ಷರ,ಉಪಾಧ್ಯಕ್ಷ ರ, ಸದಸ್ಯರ ಗೌರವಧನ ಹೆಚ್ಚಳ ಆಗಿದೆ. ಮಂಜುನಾಥ ಭಂಡಾರಿ ಅವರು ವಿಧಾನ ಪರಿಷತ್ ಗೆ ಆಯ್ಕೆ ಯಾದ ನಂತರ ಗೌರವಧನ ಹೆಚ್ಚಳವಾಗಿದ್ಧು ಇದರ ಮೊದಲು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹೆಚ್ಚಳ ಮಾಡಲು ಯಾಕೇ ಆಗಿಲ್ಲ, ಮಂಜುನಾಥ ಭಂಡಾರಿ ಅವರ ಹೋರಾಟಕ್ಕೆ ಸರ್ಕಾರ ಮಣಿದಿದೆ. ಈ ಕಾರ್ಯದಿಂದ ಪಂಚಾಯತ್ ಸದಸ್ಯ ರಿಗೆ ಹರುಷ ತಂದಿದೆ ಎಂದು ಪೆರುವಾಜೆ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.