ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಆದಿಚುಂಚನಗಿರಿ ಸ್ವಾಮೀಜಿಯವರಿಗೆ ನಿಂತಿಕಲ್ಲಿನಲ್ಲಿ ಅದ್ದೂರಿ ಸ್ವಾಗತ

0

ಸುಳ್ಯ ತಾಲೂಕಲ್ಲಿ ಮೂರು ದಿನಗಳ ಗ್ರಾಮ ವಾಸ್ತವ್ಯ ಮಾಡುವುದಕ್ಕಾಗಿ ಇಂದು ಸುಳ್ಯ ತಾಲೂಕಿಗೆ ಆಗಮಿಸಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ನಿಂತಿಕಲ್ಲಿನಲ್ಲಿ ಗೌಡ ಸಮಾಜದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.


ಡಾ.ಕೆ.ವಿ.ಚಿದಾನಂದ, ಡಾ.ಕೆ.ವಿ.ರೇಣುಕಾಪ್ರಸಾದ್, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಅಕ್ಷಯ್ ಕೆ.ಸಿ., ಡಾ.ಡಿ.ವಿ.ಲೀಲಾಧರ್, ಕಿರಣ್ ಬುಡ್ಲೆಗುತ್ತು, ಚಂದ್ರ ಕೋಲ್ಚಾರು, ಎಂ.ಪಿ.ಉಮೇಶ್, ಮತ್ತಿತರ ಗಣ್ಯರು ಸ್ವಾಮೀಜಿಯವರಿಗೆ ಹಾರಾರ್ಪಣೆ ಮಾಡಿ, ಸ್ವಾಗತ ಕೋರಿದರು. ಬಳಿಕ ವಾಹನ ಜಾಥಾದ ಮೂಲಕ ಹರಿಹರಪಲ್ಲತಡ್ಕ ಐನೆಕಿದು ಕಡೆಗೆ ಸ್ವಾಮೀಜಿಯವರನ್ನು ಕರೆದುಕೊಂಡು ಹೋಗಲಾಯಿತು.