ಬಂಟರ ಸಮುದಾಯ ಭವನಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ರೂ.5 ಲಕ್ಷ ದೇಣಿಗೆ, ಆದೇಶ ಪತ್ರ ಹಸ್ತಾಂತರ

0

ಸುಳ್ಯ ಬೂಡು – ಕೇರ್ಪಳದಲ್ಲಿ ನಿರ್ಮಾಣವಾಗಿರುವ ಬಂಟರ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ ದೇಣಿಗೆ ಮಂಜೂರಾಗಿದ್ದು ಆದೇಶ ಪತ್ರ ಹಸ್ತಾಂತರ ಡಿ.20 ರಂದು ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಯವರಿಗೆ ಆದೇಶ ಪತ್ರ ಹಸ್ತಾಂತರ ಮಾಡಿದರು.


ಈ ಸಂದರ್ಭ ಯೋಜನಾಧಿಕಾರಿ ನಾಗೇಶ್, ಮೇಲ್ವಿಚಾರಕಿ ಹೇಮಲತಾ, ಪ್ರೇಮಲತಾ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ವಲಯಾಧ್ಯಕ್ಷ ಎಂ.ವೆಂಕಪ್ಪ ಗೌಡ, ಬೂಡು ರಾಧಾಕೃಷ್ಣ ರೈ, ಯುವ ಬಂಟರ ಸಂಘದ ಅಧ್ಯಕ್ಷ ಪ್ರೀತಮ್ ರೈ ಬೆಳ್ಳಾರೆ, ಜೆ.ಕೆ.ರೈ, ಕಮಲಾಕ್ಷಿ ಟೀಚರ್, ಜಗನ್ನಾಥ ಶೆಟ್ಟಿ ಉಬರಡ್ಕ, ಗಿರೀಶ್ ರೈ ಉಬರಡ್ಕ, ಜಯಂತ್ ರೈ ಗೋಂಟಡ್ಕ, ಕಮಲಾಕ್ಷಿ ಟೀಚರ್, ಬೂಡು ಕುಸುಮಾಧರ ರೈ, ಮಹಾಬಲ ರೈ ಬೂಡು, ರೂಪಾ ಜೆ ರೈ ಮೊದಲಾದವರಿದ್ದರು.

ಬಂಟರ ಸಂಘದ ಪ್ರಧಾನ‌ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ವಂದಿಸಿದರು.