ಸುಳ್ಯ ನಗರ ಪಂಚಾಯತ್ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ

0

ಸುಳ್ಯ ನಗರ ಪಂಚಾಯತ್ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ವಿಕಲಚೇತನರ ವಿಶೇಷ ಗ್ರಾಮ ಸಭೆ ನಗರದ ಟೌನ್ ಹಾಲ್ ನಲ್ಲಿ ಡಿ.೨೦ ರಂದು ನಡೆಯಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸುಳ್ಯ ತಹಾಶೀಲ್ದಾರ್ ಅನಿತಾಲಕ್ಷ್ಮಿ ಅವರು ವಿಕಲ ಚೇತನರು ಎಲ್ಲ ರಂತೆ ಅವರಿಗೆ, ಸರ್ಕಾರ ದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳೂ, ಸಿಗಬೇಕು ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ವಿಕಲ ಚೇತನರಿಗೆ ಸರ್ಕಾರದಿಂದ ಸಿಗುವ ಸವಲತ್ತು ಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸಿಡಿಪಿಓ ರಶ್ಮಿ ಅಶೋಕ್, ಮುಖ್ಯಾಧಿಕಾರಿ ಎಂ.ಚ್.ಸುಧಾಕರ್, ನಗರ ಪಂಚಾಯತ್ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಪ್ರವೀತಾ, ಬುದ್ಧ ನಾಯ್ಕ್, ಬಾಲಕೃಷ್ಣ ಭಟ್, ಶಿಲ್ಪಾ ಸುದೇವ್, ಬೂಡು ರಾಧಾ ಕೃಷ್ಣ ರೈ, ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ನಗರ ಪಂಚಾಯತ್ ವಿಕಲ ಇಲಾಖೆಯ ಸಂಯೋಜಕ ಪ್ರವೀಣ್ ನಾಯಕ್, ತಾಲ್ಲೂಕು ಪಂಚಾಯತ್ ಎಂ.ಆರ್.ಡಬ್ಲ್ಯೂ. ಚಂದ್ರ ಶೇಖರ್, ಮತ್ತಿತರರು ಉಪಸ್ಥಿತರಿದ್ದರು.
ನಗರ ಪಂಚಾಯತ್‌ನ ಜಯಲಕ್ಷ್ಮಿ ಸ್ವಾಗತಿಸಿದರು. ಪ್ರವೀಣ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ನಾಯಕ್ ಅವರು ಸರ್ಕಾರ ದಿಂದ ವಿಕಲ ಚೇತನರಿಗೆ ಸಿಗುವ ಸವಲತ್ತು ಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿದರು. ಎಂ ರ್ ಡಬ್ಲ್ಯೂ ಚಂದ್ರ ಶೇಖರ್ ವಂದಿಸಿದರು. ನಂತರ ವಿಕಲ ಚೇತನ ರ ಗ್ರಾಮ ಸಭೆ ನಡೆಯಿತು. ಈ ವೇಳೆ ಪ್ರವೀಣ್ ನಾಯಕ್, ಜಯಲಕ್ಷ್ಮಿ, ಪುಟ್ಟಣ್ಣ, ಚಂದ್ರಶೇಖರ್ ಮೊದಲಾದವರು ಜನರು ಕೇಳಿದ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು. ನಗರ ಪಂಚಾಯತ್‌ನ ಸುದೇವ್ ಕಾರ್ಯಕ್ರಮದ ನಿರೂಪಿಸಿದರು.