ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬೆಳ್ಳಿ ಪೀಠ ಸಮರ್ಪಣೆ

0


ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೊಡಿಕಾನ ಗ್ರಾಮದ ಉರಿಮಜಲು ಶ್ರೀಮತಿ ಪ್ರೇಮಾ ವಸಂತ ಭಟ್ ಮತ್ತು ಮನೆಯವರು ಬಲಿ ಮೂರ್ತಿಯ ಸುಮಾರು ೧.೮೨೦ ಕೆ.ಜಿ ತೂಕದ ಬೆಳ್ಳಿ ಪೀಠವನ್ನು ಈ ದಿನದ ಧನುಪೂಜಾ ಸಮಯದಲ್ಲಿ ಶ್ರೀ ದೇವರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮಗ ಮೃತ್ಯುಂಜಯ ದಂಪತಿಗಳು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಹಾಗೂ ಸದಸ್ಯರು, ದೇವಳದ ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.