ಮಂಡೆಕೋಲಿನ‌ ಪುರುಷೋತ್ತಮರ ಚಿಕಿತ್ಸೆಗೆ ಬೇಕಿದೆ ನೆರವಿನ‌ ಹಸ್ತ

0

ಪುತ್ತೂರು ತಾಲೂಕು ಬನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿರುವ, ಸುಳ್ಯ ತಾಲೂಕು ಮಂಡೆಕೋಲಿನ ಪುರುಷೋತ್ತಮ (50) ಅವರು ಹೃದಯ ರೋಗಕ್ಕೆ ತುತ್ತಾಗಿ ಮಂಗಳೂರಿನ ಕೆಎಂಸಿಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1.80 ಲಕ್ಷ ರೂ. ಹೊಂದಿಸುವಂತೆ ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬ ಹಣ ಹೊಂದಿಸಲಾಗದೆ ದಾನಿಗಳ ನೆರವನ್ನು ಯಾಚಿಸಿದೆ.

ಬಡ ಕುಟುಂಬದ ಪುರುಷೋತ್ತಮ ಅವರು ಪುತ್ತೂರಿನಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದು, ಮನೆಯ ಆಧಾರಸ್ತಂಭವಾಗಿದ್ದರು. ಕುಟುಂಬದ ನಿರ್ವಹಣೆ ಹೊತ್ತ ಇವರು ಹಾಸಿಗೆ ಹಿಡಿದಿದ್ದರಿಂದ, ಚಿಕಿತ್ಸಾ ಮೊತ್ತವನ್ನು ಭರಿಸಲಾಗದೆ ಪಿಯುಸಿ ಕಲಿಯುತ್ತಿರುವ ಮಗಳು, ಮನೆಯಲ್ಲಿರುವ ಪತ್ನಿ ದಿಕ್ಕುತೋಚದಂತಾಗಿದ್ದು, ದಾನಿಗಳ ನೆರವು ಯಾಚಿಸಿದ್ದಾರೆ. ದಯವಿಟ್ಟು ಈ ಬಡ ಕುಟುಂಬಕ್ಕೆ ನೆರವಾಗುವಂತೆ ವಿನಂತಿ-

ಫೋನ್​ ಪೇ- 9481075233

PURUSHOTHAMA M
6042500102777301
Karnataka Bank, Puttur
IFSC Code- KARB0000604