ದೇವಯ್ಯ ನಾಯಕ್ ಮೂಕಾಂಬಿಕಾ ಅಡ್ಕಾರು ಹೃದಯಾಘಾತದಿಂದ ನಿಧನ

0


ಜಾಲ್ಸೂರು ಗ್ರಾಮದ ಅಡ್ಕಾರು ಮೂಕಾಂಬಿಕಾ ದೇವಯ್ಯ ನಾಯಕ್ ಅವರು ಹೃದಯಾಘಾತದಿಂದಾಗಿ ಡಿ.21ರಂದು ಅಪರಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಹಲವು ವರ್ಷಗಳ ಕಾಲ ಚಾಲಕರಾಗಿ ವೃತ್ತಿ ನಿರ್ವಹಿಸಿದ ದೇವಯ್ಯ ನಾಯಕ್ ಅವರು ಶಿಕ್ಷಣ ಇಲಾಖೆಯಲ್ಲಿ ಚಾಲಕರಾಗಿ, ಕುಂಭಕ್ಕೋಡು ಅಚ್ಚುತ ಭಟ್ ಅವರ ಚಾಲಕರಾಗಿ, ಉದ್ಯಮಿ ಹಿರಿಯರಾದ ಉಪೇಂದ್ರ ಕಾಮತ್ ಅಡ್ಕಾರು ಅವರೊಂದಿಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಸುಲೋಚನ ನಾಯಕ್ ಅಡ್ಕಾರು, ಪುತ್ರರಾದ ಜಾಲ್ಸೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ ಅಡ್ಕಾರು, ಸತೀಶ್ ಅಡ್ಕಾರು, ಪುತ್ರಿಯರಾದ ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಮಮತ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.