ಜೇಡ್ಲ ಗೋಶಾಲಾ ಕ್ಯಾಲೆಂಡರ್ ಮತ್ತು ಗೋ ನಿಧಿ ಹುಂಡಿ ಬಿಡುಗಡೆ

0

ದುಗಲಡ್ಕ ನೀರಬಿದಿರೆಯ ಈಶ್ವರಕುಮಾರ್ ಭಟ್ ರವರ (ಪಂಚವಲ್ಲೀ) ಮನೆಯಲ್ಲಿ ಹವ್ಯಕ ಮುಳ್ಳೇರಿಯಾ ಮಂಡಲದ ಸಭೆಯು ಡಿ.18 ರಂದು ನಡೆಯಿತು.
ಮಂಡಲ ಅಧ್ಯಕ್ಷರಾದ ಬಾಲಸುಬ್ರಮಣ್ಯ ಸರ್ಪಮಲೆ ಯವರು ಸಭಾಧ್ಯಕ್ಷರಾಗಿ ಭಾಗವಹಿಸಿದರು.
ಹೋಬಳಿಯ ಅಂಗಸಂಸ್ಥೆ ಸಮಿತಿ ಅಧ್ಯಕ್ಷರಾದ ಹಾರಕೆರೆ ನಾರಾಯಣ ಭಟ್ ಜೇಡ್ಲ ಗೋಪಾಲಕೃಷ್ಣ ದೇವಕೀ ಪಶುಸಂಗೋಪನಾ ಕೇಂದ್ರದ ಗೋನಿಧಿ ಹುಂಡಿಯನ್ನು ಗೋ ಕಾಣಿಕೆ ನೀಡಿ ಬಿಡುಗಡೆ ಮಾಡಿದರು. ಹಾಗೂ
ಮಂಡಲ ಅಧ್ಯಕ್ಷರಾದ ಬಾಲಸುಬ್ರಮಣ್ಯ ಸರ್ಪಮಲೆ ಯವರು ಜೇಡ್ಲ ಗೋಶಾಲೆಯ 2023ನೇ ವರ್ಷದ ಹೊಸ ಕ್ಯಾಲೆಂಡರ್ ನ್ನು ಅನಾವರಣಗೊಳಿಸಿದರು.
ಹಿರಿಯ ಗಪರುಸೇವಕರಾದ ರಾಧಾಕೃಷ್ಣ ಭಟ್, ಕೃಷ್ಣ ಭಟ್ ಅಜ್ಜಾನನ, ಸುಬ್ರಮಣ್ಯ ಭಟ್ ದಂಬೆಮೂಲೆ ಮತ್ತು ಮಾತೃತ್ವಂ ಸೇವಾ ಲಕ್ಷ ಭಾಗಿನಿಯರಾದ ಶೈಲಜಾ ಡಿ ಐ, ಅಕ್ಷತಾ ಹರೀಶ್ ರವರನ್ನು ಸನ್ಮಾನಿಸಲಾಯಿತು.

ಶಂಖನಾದ ಗುರುವಂದನೆಯೊಂದಿಗೆ ಪ್ರಾರಂಭಗೊಂಡ ಸಭೆ ಶಾಂತಿಮಂತ್ರ ದಿಂದ ಸಂಪನ್ನ ವಾಯಿತು.