ನಿಂತಿಕಲ್ಲು : ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮತ್ತು ನಬಾರ್ಡ್ ಸಹಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಬಾರ್ಡ್ ಸಹಯೋಗದೊಂದಿಗೆ ಡಿಸೆಂಬರ್ 21ರಂದು ನಿಂತಿಕಲ್ಲುನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯ್ರಮ ನಡೆಯಿತು. ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿ, ಬ್ಯಾಂಕ್ ನಡೆದು ಬಂದ ದಾರಿ ಮತ್ತು ಗ್ರಾಹಕರಿಗೆ ಸವಲತ್ತುಗಳ ಬಗ್ಗೆ ತಿಳಿಸಿದರು.
ನಿವೃತ್ತ ಉಪತಹಶೀಲ್ದಾರ್ ಹಾಗೂ ಹರ್ಷ ಕಾಂಪ್ಲೆಕ್ಸ್ ಮಾಲಕ ಜನಾರ್ದನ ಪೂಜಾರಿ ಅಲೆಕ್ಕಾಡಿ, ಶ್ರೀದೇವಿ ಅಗ್ರಿಟೆಕ್ ಮಾಲಕ ತಿಮ್ಮಪ್ಪ ಶೆಟ್ಟಿ, ಶಾಖಾ ಪ್ರಬಂಧಕರಾದ ಸುಧಾ ಹಿಮಕರ, ಸಂಪನ್ಮೂಲ ವ್ಯಕ್ತಿ ರಕ್ಷಿತ್ ವೇದಿಕೆಯಲ್ಲಿದ್ದರು.


ಶಶಿಕಲಾ, ರಕ್ಷಿತ್, ಗಂಗಾಧರ ಪೊಳೆಂಜ, ಸುಧಾ ಹಿಮಕರ ಅತಿಥಿಗಳನ್ನು ಬರಮಾಡಿಕೊಂಡರು.
ಕಲ್ಮಡ್ಕ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್, ಪ್ರಗತಿಪರ ಕೃಷಿಕ ರಮೇಶ್ ಭಟ್ ಬೆಟ್ಟ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಂತಿಕಲ್ಲು ಶಾಖಾ ವ್ಯವಸ್ಥಾಪಕ ಚರಣ್, ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಅಶೋಕ್ ಕುಮಾರ್ ಊರುಸಾಗು, ಮುರುಳ್ಯ ಎಣ್ಮೂರು ಸೊಸೈಟಿ ಸಹಾಯಕ ವ್ಯವಸ್ಥಾಪಕರಾದ ಸುಧೀನ್ ಕುಮಾರ್ ರೈ, ಕೃಷಿಕ ಉಮೇಶ್ ರೈ ಮರುವಂಜ, ಬ್ಯಾಂಕ್ ಸಿಬ್ಬಂದಿ, ನವೋದಯ ಪ್ರೇರಕರುಗಳು, ಪಿಗ್ಮಿ ಸಂಗ್ರಹಕರು ಗ್ರಾಹಕರು ಉಪಸಿತರಿದ್ದರು.
ನವೋದಯ ಪ್ರೇರಕಿ ಸಂಧ್ಯಾ ಮಂಡೆಕೋಲು ಪ್ರಾರ್ಥಿಸಿದರು. ಡಿಸಿಸಿ ಬ್ಯಾಂಕ್ ಸಿಬ್ಬಂದಿ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶಶಿಕಲ ವಂದಿಸಿದರು.
(ವರದಿ : ಎ ಎಸ್ ಎಸ್ ಅಲೆಕ್ಕಾಡಿ)