ಮಾತೃಶಕ್ತಿ,ಸಂಘಟನಾ ಶಕ್ತಿ ಜಾಗೃತವಾಗಬೇಕು : ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬರೆಮೇಲು ಶ್ರೀ ಉದ್ಭವ ತ್ರಿ ಶಕ್ತಿ ಸ್ವರೂಪಿಣಿ ಮಹಾಕಾಳಿ ಕ್ಷೇತ್ರದಲ್ಲಿ ಅನುಗ್ರಹ ಸಂದೇಶ ,ಪಾದಪೂಜೆ

0

ಸಂಘಟನೆಗಳ ಶಕ್ತಿಗಳ ಅರಿವನ್ನು ಅರ್ಥಮಾಡಿಕೊಳ್ಳಬೇಕು, ದೇಶ ಕಟ್ಟುವ ಕೆಲಸದಲ್ಲಿ ಮಾತೃಶಕ್ತಿ,ಸಂಘಟನಾ ಶಕ್ತಿಯನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ನುಡಿದರು.
ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಳಕ್ಕೆ ಸುಳ್ಯ ತಾಲೂಕಿಗೆ ಆಗಮಿಸಿರುವ ಸ್ವಾಮೀಜಿಯವರು ಬರೆಮೇಲು ಶ್ರೀ ಉದ್ಭವ ತ್ರಿ ಶಕ್ತಿ ಸ್ವರೂಪಿಣಿ ಮಹಾಕಾಳಿ ಕ್ಷೇತ್ರದಲ್ಲಿ ಅನುಗ್ರಹ ಸಂದೇಶ ನೀಡಿ ,ಪಾದಪೂಜೆ ಸ್ವೀಕರಿಸಿದರು.

“ಅಡುಗೆ ಮನೆಯಲ್ಲಿರುವ ಮಹಿಳೆಯರ ಶಕ್ತಿ,ಜ್ಞಾನ ಕೂಡ ದೇಶ ಕಟ್ಟುವ ಕೆಲಸಕ್ಕೆ ಉಪಯೋಗವಾಗಬೇಕು.ವ್ಯಕ್ತಿಯ ಪೂರ್ಣ ಶಕ್ತಿ ವಿಕಾಸವಾಗಬೇಕಾದರೆ ಮನಸ್ಸು ವಿಕಾಸ ಆಗಬೇಕು.ಮನಸ್ಸು ಅರಳಿದಷ್ಟು ಶಕ್ತಿ ವಿಕಾಸ ಆಗುತ್ತದೆ.ದೇಶವನ್ನು,ಸಮಾಜವನ್ನು ,ಮನಸ್ಸನ್ನು ಕಟ್ಟುವ ಕೆಲಸ ಆಗಬೇಕು.ಬರೆಮೇಲು ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕು.ಎಲ್ಲರೂ ಸಹಕಾರ ನೀಡಬೇಕು” ಎಂದು ಸ್ವಾಮೀಜಿ ನುಡಿದರು.
ಬರೆಮೇಲು ಕರುಣಾಕರ ಗೌಡ ಮತ್ತು ಶ್ರೀಮತಿ ಹೇಮಲತಾ ದಂಪತಿ ಪಾದಪೂಜೆ ಸಲ್ಲಿಸಿದ ಬಳಿಕ 30 ಕ್ಕಿಂತಲೂ ಹೆಚ್ಚು ಮನೆಯವರು ಪಾದಪೂಜೆ ಸಲ್ಲಿಸಿದರು.


ಬರೆಮೇಲು ಕರುಣಾಕರ ಗೌಡ ಮತ್ತು ಶ್ರೀಮತಿ ಹೇಮಲತಾ ದಂಪತಿ, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಟ್ರಸ್ಟ್ ನ ಸದಸ್ಯ ಗೋಪಾಲಕೃಷ್ಣ ಉಪಸ್ಥಿತರಿದ್ದರು.


ದಿನೇಶ್ ಮಡ್ತಿಲ ಸ್ವಾಗತಿಸಿ,ಚಂದ್ರಾ ಕೋಲ್ಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ಪಾದಪೂಜೆ ನಡೆದ ಬಳಿಕ ವೇದಿಕೆಯಲ್ಲಿ ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಚಾರಿತ್ರಿಕ ನಾಟಕ ಪ್ರದರ್ಶನಗೊಂಡಿತು.
ಸಂಜೆ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಸುದ್ದಿ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಗಿತ್ತು.ದೇಶ,ವಿದೇಶದಲ್ಲಿರುವ ಸಾವಿರಾರು ಜನರು ಕಾರ್ಯಕ್ರಮವನ್ನು ವೀಕ್ಷಿಸಿದರು.