ಸುಳ್ಯ ಎನ್ನೆ oಪಿಯುಸಿಯಲ್ಲಿ ಉಪನ್ಯಾಸ ಕಾರ್ಯಕ್ರಮ

0


ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ crypto currency ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಎನ್ನೆoಸಿ ಸುಳ್ಯದ ಅರ್ಥ ಶಾಸ್ತ್ರ ವಿಭಾಗದ ವಿಭಾಗ ಮುಖ್ಯಸ್ಥೆ ಡಾ ವಿಜಯಲಕ್ಷ್ಮೀ ಅವರು ಉಪನ್ಯಾಸ ನೀಡುತ್ತಾ ಪ್ರಸ್ತುತ ಅರ್ಥವ್ಯವಸ್ಥೆಯಲ್ಲಿ crypto currency ಯ ಮಹತ್ವ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ತಿಳಿಸಿದರು. ನಾವು ದಿನನಿತ್ಯ ಬಳಸುವ ಸಾಮಾನ್ಯ ಕರೆನ್ಸಿಗಿಂತ ಹೇಗೆ ಇದು ಭಿನ್ನವಾಗಿ ಕಾರ್ಯನಿರ್ವಹಿಸುತ್ತ ಇದೆ ಎಂಬುದನ್ನು ತಿಳಿಸಿದರು.ವೇದಿಕೆಯಲ್ಲಿ ವಿ.ಕ್ಷೇಮಾಧಿಕಾರಿಗಳಾದ ದಾಮೋದರ ಪಿ, ಸಾವಿತ್ರಿ ಕೆ ವಾಣಿಜ್ಯ ವಿಭಾಗದ ಸಂಚಾಲಕಿ ಹರ್ಷಿತ ಎ ಬಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ರಕ್ಷಾ ಮತ್ತು ಅಂಬಿಕಾ
ಪ್ರಾರ್ಥಿಸಿ, ನಮಿಷ್ ಸ್ವಾಗತಿಸಿದರು, ದೀಕ್ಷಿತಾ ಆಚಾರ್ ಅತಿಥಿಗಳನ್ನು ಪರಿಚಯಿಸಿದರು.ಅಂಕಿತ್ ಕೃಷ್ಣ ವಂದಿಸಿ, ರಾಶಿ ಡಿ ಡಿ ನಿರೂಪಿಸಿದರು.