ಸುಳ್ಯದಲ್ಲಿ ಅರುಣೋದಯ ಫ್ರೆಶ್ ಚಿಕನ್ ಉದ್ಘಾಟನೆ, ಆರಿಕೋಡಿ ಶ್ರಿ ಚಾಮುಂಡೇಶ್ವರಿ ಕ್ಷೇತ್ರದ ಹರೀಶ್ ಆರಿಕೋಡಿ ದೀಪ ಪ್ರಜ್ವಲನೆ

0

ಅರುಣೋದಯ ಫ್ರೆಶ್ ಚಿಕನ್ ಇಂದು ಜ್ಯೋತಿ ಸರ್ಕಲ್ ಬಳಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಶ್ರಿ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇಲ್ಲಿನ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ, ರಿಬ್ಬನ್ ಬಿಡಿಸಿ ಇಂದು ಉದ್ಘಾಟಿಸಿದರು.

ಬಳಿಕ ಮಾತನಾಡಿ ಅವರು ಕೋರೋನಾ ಬಳಿಕ ಚೇತರಿಸಿಕೊಳ್ಳುತ್ತಿರುವ ಸಂಸ್ಥೆಯಲ್ಲಿ ಇದೂ ಒಂದು ಇದು ಇನ್ನಷ್ಟು ಬೆಳೆದು ರಾಜ್ಯ, ರಾಷ್ಟ್ರ ವ್ಯಾಪಿಯಾಗಿ ಹರಡಲಿ. ಇದರೊಂದಿಗೆ ಈ ಸಂಸ್ಥೆಯನ್ನು ಬೆಳೆಸುವ ಜವಾಬ್ದಾರಿ ನಮ್ಮಲ್ಲಾ ಬಂಧು ಬಾಂದವರಿಗಿದೆ ಅದನ್ನು ಅರಿತು ಪ್ರೋತ್ಸಾಹಿಸಿ ಎಂದು ಹಾರೈಸಿದರು. ಈ ಸಂದರ್ಭ ಆರಿಕೋಡಿ ಶ್ರಿ ಚಾಮುಂಡೇಶ್ವರಿ ಕ್ಷೇತ್ರದ ನೂರಾರು ಭಕ್ತರು ಶ್ರೀಗಳ ಪಾದಕ್ಕೆರಗಿ ಆಶೀರ್ವಾದ ಬೇಡಿದರು.


ಅರುಣೋದಯ ಇಂಟಿಗ್ರೇಷನ್ ಮತು ಲೈನ್‌ಸೇಲ್ ಕೊಪ್ಪಡ್ಕ ಕಲ್ಮಕಾರು ಇದರ ಮಾಲಕ ಪ್ರವೀಣ್ ಕೊಪ್ಪಡ್ಕ ಮತ್ತು ಯತೀಶ್ ಕೊಂದ್ರಮಜಲು ಐವರ್ನಾಡು ಮಾಲಕತ್ವದಲ್ಲಿ ಈ ಚಿಕನ್ ಸೆಂಟರ್ ಕಾರ್ಯಾಚರಿಸಲಿದ್ದು ಸಂಸ್ಥೆಯವರೇ ಸಾಕಿ ಬೆಳೆಸಿದ ಬಾಯ್ಲಾರ್, ಟೈಸನ್, ನಾಟಿ ಕೋಳಿ ರಖಂ ಮತ್ತು ಹೋಲ್ ಸೇಲ್ ಧರದಲ್ಲಿ ದೊರೆಯಲಿದ್ದು, ಮದುವೆ ಮತ್ತು ಇನ್ನಿತರ ಸಭೆ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುವುದು ಹಾಗೂ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಇರಲಿದೆ ಎಂದು ಮಾಲಕರು ತಿಳಿಸಿದ್ದಾರೆ.