ನೆಹರು ಮೆಮೋರಿಯಲ್ ಕಾಲೇಜು : ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

0


ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಡಿ. ೨೨ರಂದು ಕಾಲೇಜು ಸಭಾಂಗಣದಲ್ಲಿ ೨೦೨೨-೨೩ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಎಂ ಬಾಲಚಂದ್ರಗೌಡ, ಶೈಕ್ಷಣಿಕ ನಿರ್ದೇಶಕರು, ಎನ್.ಎಂ.ಸಿ ಸುಳ್ಯ ಇವರು ವಿದ್ಯಾರ್ಥಿ ಮತ್ತು ಪೋಷಕರನ್ನ ಕುರಿತು, ಮಕ್ಕಳ ಶಿಕ್ಷಣದ ಕಡೆಗೆ ಹೆತ್ತವರ ಜವಾಬ್ದಾರಿಯ ಬಗ್ಗೆ ಸವಿವರವಾಗಿ ಮಾತನಾಡಿದರು. ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತುರಾಯ, ದಿಕ್ಸೂಚಿ ಭಾಷಣದಲ್ಲಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು, ಶೈಕ್ಷಣಿಕ ಪ್ರಗತಿಯನ್ನ ಆಗಾಗ್ಗೆ ಪರಿಶೀಲಿಸಿಕೊಂಡರೆ ಒಳಿತು ಎಂದರು.


ವೇದಿಕೆಯಲ್ಲಿ ಅತಿಥಿಗಳಾಗಿ ಕೆ.ಟಿ ವಿಶ್ವನಾಥ ಕಾರ್ಯದರ್ಶಿ, ಹಿರಿಯ ವಿದ್ಯಾರ್ಥಿ ಸಂಘ, ಎನ್.ಎಂ.ಸಿ ಸುಳ್ಯ, ಶ್ರೀಮತಿ ರತ್ನಾವತಿ ಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ, ಎನ್.ಎಂ.ಸಿ ಸುಳ್ಯ ಉಪಸ್ಥಿತರಿದ್ದರು. ಸದ್ರಿ ಸಭೆಯಲ್ಲಿ ೨೦೨೨-೨೩ನೇ ಸಾಲಿಗೆ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಶ್ರೀ ಚಿನ್ನಪ್ಪ ಕೆ.ಕೆ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಕುಮಾರಿ ರತ್ನ ಸಿಂಚನ ಮತ್ತು ತಂಡ ಪ್ರಾರ್ಥಿಸಿದರು. ಪ್ರೊ. ತಿಪ್ಪೇಸ್ವಾಮಿ ಡಿ.ಎಚ್, ಕಾರ್ಯದರ್ಶಿ, ಶಿಕ್ಷಕ-ರಕ್ಷಕ ಸಂಘ, ಎನ್.ಎಂ.ಸಿ ಸುಳ್ಯ, ಇವರು ಸ್ವಾಗತಿಸಿದರು. ಶ್ರೀ ಕುಲದೀಪ್ ಪಿ.ಪಿ, ಮುಖ್ಯಸ್ಥರು, ಸಸ್ಯಶಾಸ್ತ್ರ ವಿಭಾಗ, ಎನ್.ಎಂ.ಸಿ ಸುಳ್ಯ ವಂದಿಸಿದರು. ಕುಮಾರಿ ಚೈತನ್ಯ ಕೆ. ಕಾರ್ಯಕ್ರಮ ನಿರೂಪಿಸಿದರು.