ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾದ ರಕ್ಷಿತಾ ಮಡ್ತಿಲರವರಿಗೆ ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಸನ್ಮಾನ

0

ಮಡ್ತಿಲ ಕುಟುಂಬದವರಾಗಿದ್ದು ಈಗ ಧರ್ಮಸ್ಥಳದಲ್ಲಿ ನೆಲೆಸಿರುವ ಭಾಸ್ಕರ ಗೌಡ ಮಡ್ತಿಲ ಮತ್ತು ಶ್ರೀಮತಿ ಮಮತ ದಂಪತಿಗಳ ಪುತ್ರಿ ಪ್ಯಾರ ಮಿಲಿಟರಿ ಪೋರ್ಸ್ ಆದ ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದು ಇವರನ್ನು ಸ್ವಾಮೀಜಿಗಳು ಸನ್ಮಾನಿಸಿದರು.
ಎಸ್.ಎನ್.ಮನ್ಮಥರವರ ನಿವಾಸದಲ್ಲಿ ಪಾದ ಪೂಜೆ ಸ್ವೀಕರಿಸಿ,ಅನುಗ್ರಹ ಸಂದೇಶ ನೀಡಿದ ಬಳಿಕ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ರಕ್ಷಿತಾ ಮಡ್ತಿಲರವರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಎಸ್.ಎನ್.ಮನ್ಮಥ ಮತ್ತು ಮನೆಯವರು, ರಕ್ಷಿತಾ ತಂದೆ ಭಾಸ್ಕರ ಗೌಡ ಮಡ್ತಿಲ, ತಾಯಿ ಮಮತ, ಶಾಂತಾರಾಮ ಕಣಿಲೆಗುಂಡಿ ಹಾಗೂ ಮಡ್ತಿಲ ಕುಟುಂಬಸ್ಥರು,ಗ್ರಾಮಸ್ಥರು ಉಪಸ್ಥಿತರಿದ್ದರು.