ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಂಜಿನಿಯವರಿಗೆ ಚಿನ್ನ ಹಾಗೂ ಬೆಳ್ಳಿ ಪದಕ

0

ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ರಂಜಿನಿ ಬಿ. ಅವರು ದ್ವಿತೀಯ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಫಾರ್ ಬ್ಲೈಂಡ್ – 2022 ರಲ್ಲಿ 14 ರಿಂದ 16 ರವರೆಗೆ ಡಿಸೆಂಬರ್ ನಲ್ಲಿ ನವ ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮತ್ತು 400 x 100 ರಿಲೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.


ಈ ಹಿಂದೆ ಪಾರಾ ಒಲಿಂಪಿಕ್ ಒರಿಸ್ಸಾ ಹಾಗೂ ಕಂಠೀರವ ಸ್ಟೇಡಿಯಂ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದು, ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸತತ ಮೂರು ವರ್ಷ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ.


ಇವರು ಮುರುಳ್ಯ ಗ್ರಾಮ ಪಂಚಾಯತಿನ ಸಿಬ್ಬಂದಿ ಹಾಗೂ ಎಡಮಂಗಲ ಶಾಂತಿಯಡ್ಕ ಜಯಂತಿ ಜನಾರ್ಧನ ರವರ ಪುತ್ರಿ.