ಜ.1: ಆಲೆಟ್ಟಿ- ಬಾರ್ಪಣೆ ವಿಕ್ರಮ ಯುವಕ ಮಂಡಲದ ವತಿಯಿಂದ ಮುಕ್ತ ಕೆಸರುಗದ್ದೆ ಕ್ರೀಡಾ ಕೂಟ

0

ಆಲೆಟ್ಟಿ ಗ್ರಾಮದ ಬಾರ್ಪಣೆ ವಿಕ್ರಮ ಯುವಕ ಮಂಡಲದ ಆಶ್ರಯದಲ್ಲಿ ಮುಕ್ತ ಕೆಸರುಗದ್ದೆ ಕ್ರೀಡಾ ಕೂಟ-2023 ಮತ್ತು ಶ್ರೇಷ್ಠ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಜ.1ರಂದು ನಿವೃತ್ತ ಸೈನಿಕ ಕಲ್ಲೆಂಬಿ ಗಂಗಾಧರ ಗೌಡ ರವರ ಗದ್ದೆಯಲ್ಲಿ ನಡೆಯಲಿರುವುದು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ವಿಕ್ರಮ ಯುವಕ ಮಂಡಲ ಬಾರ್ಪಣೆಯ ಅಧ್ಯಕ್ಷ ಪ್ರಶಾಂತ್ ಕೋಲ್ಚಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವರು ಶಾಸಕರಾದ ಎಸ್.ಅಂಗಾರ ಕ್ರೀಡಾ ಕೂಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ., ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು , ಎ.ಪಿ.ಎಂ.ಸಿ ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಪ್ರಸಾದ್ ಗಬ್ಬಲ್ಕಜೆ ಉಪಸ್ಥಿತರಿರುವರು.
ಈ ಸಂದರ್ಭ ಭಾರತೀಯ ಭೂಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಿವೃತ್ತ ಯೋಧ ಗಂಗಾಧರ ಗೌಡ ದಂಪತಿ ಯನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು.
ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ, ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆ, ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಕಬಡ್ಡಿ ಪಂದ್ಯಾಟ ಮತ್ತು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ, ರಿಲೇ ಓಟ, ಕೆಸರು ಗದ್ದೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ.
ಸಂಜೆ ನಡೆಯಲಿರುವ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ್ ನಾರ್ಕೋಡು ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕ ಗಂಗಾಧರ ಗೌಡ ಕಲ್ಲಿಂಬಿ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ,ಸುಳ್ಯ ಕ್ರೀಡಾ ಭಾರತಿ ಅಧ್ಯಕ್ಷ ಎ.ಸಿ. ವಸಂತ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ದಯಾನಂದ ಪಾತಿಕಲ್ಲು, ವಿಕ್ರಮ ಯುವಕ ಮಂಡಲದ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಕುಂಚಡ್ಕ, ಕಾರ್ಯದರ್ಶಿ ರಾಜೇಶ್ ಆನೆಕಲ್ಲು ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಪಂದ್ಯಾಟದಲ್ಲಿ ಸ್ಪರ್ಧಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು ತಿಳಿಸಿರುತ್ತಾರೆ.