ಜ.03 ರಿಂದ ಜ.12 : ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವ, ಜ.11 ರಂದು ರಥೋತ್ಸವ

0

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವು ಜ.03 ರಂದು ಪ್ರಾರಂಭಗೊಂಡು ಜ.12 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಕೆ.ಯು.ಪದ್ಮನಾಭ ತಂತ್ರಿಗಳವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.28 ರಂದು ಮುಹೂರ್ತದ ಗೊನೆ ಕಡಿಯಲಾಗುವುದು.
ಜ.03 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು.
ಸಂಜೆ ಪನ್ನೆಬೀಡು ನಾಲ್ಕು ಸ್ಥಾನ ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರುವುದು. ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಬಂದ ಬಳಿಕ ಧ್ವಜಾರೋಹಣ ನಡೆಯಲಿದೆ.
ಜ.05 ರಂದು ಬೆಳಿಗ್ಗೆ ಪನ್ನೆಬೀಡು ಭಗವತಿ ಸ್ಥಾನದಲ್ಲಿ ಪ್ರತಿಷ್ಠಾ ದಿನ ಮಹಾಪೂಜೆ ನಡೆಯಲಿದೆ. ಜ.08 ರಂದು ರಾತ್ರಿ ಉತ್ಸವ ಬಲಿ ಹೊರಡುವುದು. ಜ.09ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ, ನಡುಬೆಳಗು,ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ವಿವೇಕಾನಂದ ವೃತ್ತ ಹಳೆಗೇಟು,ಹೊಸಗದ್ದೆ ಹಳೆಗೇಟು ಕಟ್ಟೆ, ಅಮೃತಭವನ,ರಾಮಮಂದಿರ,ಜಟ್ಟಿಪಳ್ಳ ಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯಲಿದೆ.
ಜ.10 ರಂದು ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು, ಕಾನತ್ತಿಲ ದೈವಗಳ ಭಂಡಾರ ಬರುವುದು ನಂತರ ವಾಲಸಿರಿ ಉತ್ಸವ ನಡೆಯಲಿದೆ.
ಜ.11ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ,ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ರಥೋತ್ಸವ ನಡೆಯಲಿದೆ.ಜ.12 ರಂದು ಬೆಳಿಗ್ಗೆ ಆರಾಟ ಬಾಗಿಲು ತೆಗೆಯುವುದು, ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರಾಧ್ವಾಜಾಶ್ರಮ ಅರಂಬೂರು ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಲಿದೆ.ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರುವುದು,ಉತ್ಸವ ಬಲಿ ಹೊರಟು ಪಟ್ಟಣ ಸವಾರಿ, ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ ,ಅರಣ್ಯ ಇಲಾಖೆ,ಕೇರ್ಪಳ,ತಾಲೂಕು ಕಚೇರಿ,ಪಯಸ್ವಿನಿ ನದಿ ಬಳಿ ಕಟ್ಟೆಪೂಜೆಗಳು ನಡೆಯಲಿದೆ. ನಂತರ ಅವಭೃತ ಸ್ನಾನವಾಗಿ ಬಂದು ದರ್ಶನ ಬಲಿ ಬಟ್ಟಲು ಕಾಣಿಕೆ,ಧ್ವಜಾವರೋಹಣ ನಡೆಯಲಿದೆ.
ಜ.13 ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಲಿದೆ.