ಜಯನಗರ :ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

0

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ದೃಷ್ಟಿ ಮೀಡಿಯಾ ಮತ್ತು ಸಂಘಟನಾ ಸಂಸ್ಥೆ ಇದರ ಆಶ್ರಯದಲ್ಲಿ ಇಂದು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜಯನಗರ ಶಾಲಾ ಬಳಿ ನಡೆಯಿತು.
ಸಾಮಾಜಿಕ ಸೇವೆಯಲ್ಲಿ ಯಶಸ್ವಿ ಹದಿನೈದು ವರ್ಷಗಳ ಪೂರೈಕೆಯೊಂದಿಗೆ ಶಿಕ್ಷಣ ಮತ್ತು ಸಮಾಜದ ಜಾಗೃತಿ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಡಿಜಿಟಲ್ ಮಾರ್ಕೆಟಿಂಗ್ ಸರ್ವಿಸ್ ಮೂಲಕ ಪರಿಚಿತಗೊಂಡಿರುವ ಸಂಸ್ಥೆ ಇದಾಗಿದೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಶಿಲ್ಪಾ ಸುದೇವ್, ಧೀರಾ ಕ್ರಾಸ್ತಾ, ಸ್ಥಳೀಯ ಮುಖಂಡರುಗಳಾದ ರಾಕೇಶ್ ಕುಂಟಿಕಾನ, ಮಹಮ್ಮದ್ ಮೊಟ್ಟೆತೋಡಿ, ಸುಂದರ ಕುತ್ಪಾಜೆ, ನವೀನ್ ಮಚಾದೋ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ, ಮೊದಲಾದವರು ಉಪಸ್ಥಿತರಿದ್ದರು.
ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಗರ ಪಂಚಾಯತಿ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ದೃಷ್ಟಿ ಮೀಡಿಯಾ ಮತ್ತು ಸಂಘಟನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೊಡಂಕೇರಿ ವಂದಿಸಿದರು.