ಡಿ.31:ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ದರ್ಜೆ ಸಹಾಯಕ ಕೆ.ಆನಂದ ಗೌಡ ನಿವೃತ್ತಿ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಥಮ ದರ್ಜೆ ಸಹಾಯಕರಾಗಿರುವ ಕೆ.ಆನಂದ ಗೌಡ ರವರು ಡಿ.31 ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ.
ಇವರು ಕೋಲ್ಚಾರು ಮನೆತನದ ರಾಮಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಪುತ್ರರಾಗಿ 1962 ರಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಆಲೆಟ್ಟಿ ಯ ನಾರ್ಕೋಡು ಮತ್ತು ಭೂತಕಲ್ಲು ಸರಕಾರಿ ಶಾಲೆಯಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ಸುಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. 1985 ರಲ್ಲಿ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೋಲ್ಚಾರು ಶಾಖೆಯಲ್ಲಿ ಮಾರಾಟ ವಿಭಾಗದಲ್ಲಿ ಸೇವೆ ಪ್ರಾರಂಭ, 1993 ರಲ್ಲಿ ಮೂಡಬಿದಿರೆಯಲ್ಲಿ ಜಿ.ಡಿ.ಸಿ.ತರಬೇತಿ ಪಡೆದು 1995 ರಲ್ಲಿ ಸಂಸ್ಥೆಯ ಖಾಯಂ ನೌಕರರಾಗಿ ನೇಮಕಗೊಂಡು ದ್ವಿತೀಯ
ದರ್ಜೆ ಸಹಾಯಕರಾಗಿ ಅರಂಬೂರು ಮತ್ತು ಕೋಲ್ಚಾರು ಶಾಖೆಯ ಮಾರಾಟ ವಿಭಾಗದಲ್ಲಿ ಸೇವೆ, ಆಲೆಟ್ಟಿ ಕೇಂದ್ರ ಕಚೇರಿಯ ಮಾರಾಟ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2012 ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿಗೊಂಡು ಕೇಂದ್ರ ಕಚೇರಿಯ ನಗದು ವಿಭಾಗದಲ್ಲಿ ಸೇವೆ, 2017 ರಿಂದ ಅರಂಬೂರು ಶಾಖೆಯ ಪ್ರಭಾರ ಶಾಖಾವ್ಯವಸ್ಥಾಪಕರಾಗಿ ಸೇವೆ 2020 ರಿಂದ ಕೋಲ್ಚಾರು ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕರಾಗಿ ಸೇವೆ ಹಾಗೂ 2021 ರಿಂದ 2022 ರ ತನಕ ವಿವಿಧ ಹುದ್ದೆಯಲ್ಲಿ ಕೇಂದ್ರ ಕಚೇರಿ ಆಲೆಟ್ಟಿ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಇವರ ಪತ್ನಿ ದೇರಾಜೆ ಮನೆತನದ ಬಾಲಣ್ಣ ಗೌಡ ಮತ್ತು ಹೊನ್ನಮ್ಮ ದಂಪತಿಯ ಪುತ್ರಿ ಶ್ರೀಮತಿ ಸತ್ಯವತಿ, ಇಬ್ಬರು ಪುತ್ರರಾದ ಆದರ್ಶ ಮತ್ತು ವಿಜೇಶ್ ರೊಂದಿಗೆ ಆಲೆಟ್ಟಿ ಗ್ರಾಮದ ಬಿಲ್ಲರಮಜಲು ಎಂಬಲ್ಲಿ ಸುಖ ಸಂಸಾರ ಸಾಗಿಸುತ್ತಿದ್ದಾರೆ.