ಕು. ಸಂಹಿತಾ ಮೇಲ್ಕಟ್ಟ ಯೇನೆಕಲ್ಲು ಹೃದಯಾಘಾತದಿಂದ ನಿಧನ

0


ಯೇನೆಕಲ್ಲು ಗ್ರಾಮದ ಮೇಲ್ಕಟ್ಟ ಸಾಯಿಕಿರಣ್ ಭಟ್ ರ ಪುತ್ರಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಕು.‌ ಸಂಹಿತಾ ಹೃದಯಾಘಾತದಿಂದ ಇಂದು ನಿಧನರಾದರು. ಇವರಿಗೆ 18 ವರ್ಷ ವಯಸ್ಸಾಗಿತ್ತು. ಸಾಯಿಕಿರಣ್ ರು ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದಾರೆ. ಪುತ್ರ ಕೆಲವು ವರ್ಷಗಳ ಹಿಂದೆ ಅಸೌಖ್ಯದಿಂದ ಸಾವನ್ನಪ್ಪಿರುತ್ತಾರೆ. ಇಡೀ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪುತ್ರಿ ಹೃದಯಾಘಾತದಿಂದ ನಿಧನ ಹೊಂದಿರುವುದು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ.