ತುಕಾರಾಮ ನೆಕ್ರಾಜೆ ಅಸೌಖ್ಯದಿಂದ ನಿಧನ

0


ಯೇನೆಕಲ್ಲು ಗ್ರಾಮದ ನೆಕ್ರಾಜೆ ತುಕಾರಾಮ ಗೌಡ ಅಸೌಖ್ಯದಿಂದ ಡಿ. 22ರಂದು ನಿಧನರಾದರು. ಇವರಿಗೆ 59 ವರ್ಷ ವಯಸ್ಸಾಗಿತ್ತು. ಇವರು ಕೆಲವು ರ್ಷಗಳ ಹಿಂದೆ ಬೆಂಗಳೂರು, ಸುಬ್ರಹ್ಮಣ್ಯದಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸಿದ್ದರು. ಮೃತರು ಪತ್ನಿ ಶ್ರೀಮತಿ ಯಮುನಾ ನೆಕ್ರಾಜೆ, ಪುತ್ರ ಸುಬ್ರಹ್ಮಣ್ಯ ಕುಮಾರಧಾರದಲ್ಲಿ ಬಟ್ಟೆ ಅಂಗಡಿಯನ್ನು ಹೊಂದಿರುವ ಕೀರ್ತನ್ ನೆಕ್ರಾಜೆ, ಪುತ್ರಿ ಶ್ರೀಮತಿ ಮಮತಾ ಕೃಷ್ಣಕಾಂತ್ ಮಂಡ್ಯ ಸೇರಿದಂತೆ 7 ಮಂದಿ ಸಹೋದರರು, ಮೂವರು ಸಹೋದರಿಯರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.