ದುಗ್ಗಲಡ್ಕ ವಾರ್ಡ್‌ನಲ್ಲಿ ವಿವಿಧ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಗುದ್ದಲಿಪೂಜೆ

0


ಸುಳ್ಯ ನಗರ ಪಂಚಾಯತ್ ವ್ಯಾಪ್ತಿ ಯ ದುಗ್ಗಲಡ್ಕ ವಾರ್ಡ್ ನಲ್ಲಿ ವಿವಿಧ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಇಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಗುದ್ದಲಿ ಪೂಜೆ ನೆರವೇರಿಸಿದರು.
ನಗರ ಪಂಚಾಯತ್ ನ ವಿವಿಧ ಅನುದಾನದಲ್ಲಿ ಒಟ್ಟು 10ಲಕ್ಷ ವೆಚ್ಚದಲ್ಲಿ ದುಗ್ಗಲಡ್ಕದ ಹೈಸ್ಕೂಲ್ ರಸ್ತೆ ಕಾಂಕ್ರೀಟೀಕರಣ, ದುಗ್ಗಲಾಯ ದೈವಸ್ಥಾನಕ್ಕೆ ಭಂಡಾರ ಬರುವ ರಸ್ತೆಯ ಕಾಂಕ್ರೀಟೀಕರಣ ಮತ್ತು ಕೊಳಂಜಿಕೋಡಿ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ನಡೆಯಲಿದೆ.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ,ಪ್ರಮುಖರಾದ ಹೇಮಂತಕುಮಾರ್ ಕಂದಡ್ಕ,ದಿನೇಶ್ ಡಿ.ಕೆ.,ಚಂದ್ರಶೇಖರ ಗೌಡ ಮೋಂಟಡ್ಕ, ಧನಂಜಯ (ಮನು) ದುಗ್ಗಲಡ್ಕ, ದೇವಪ್ಪ ನಾಯ್ಕ್ ಮೂಡೆಕಲ್ಲು, ನಾರಾಯಣ ಮಣಿಯಾಣಿ, ಗಿರೀಶ್ ರೈ ಮೂಡೆಕಲ್ಲು,ರವಿಚಂದ್ರ ಈಶ್ವರಡ್ಕ,ವಾರಿಜ ಕೊರಗಪ್ಪ ಕೊಯಿಕುಳಿ, ಸುಬ್ರಹ್ಮಣ್ಯ ಕುಂಬೆತ್ತಿಬನ, ಬಾಬು ದುಗ್ಗಲಡ್ಕ, ಜಯರಾಮ್ ದುಗ್ಗಲಡ್ಕ ಮೊದಲಾದವರು ಉಪಸ್ಥಿತರಿದ್ದರು.