ನಾಲ್ಕುರು : ಕೊರಗಜ್ಜ ದೈವದ ಪ್ರತಿಷ್ಠಾಪನೆ

0

ನಾಲ್ಕುರು ಗ್ರಾಮದ ಕೊರಗಜ್ಜ ಮತ್ತು ಗುಳಿಗರಾಜ ದೈವದ ಸೇವಾ ಸಮಿತಿ, ಛತ್ರಪಾಡಿ ಇಲ್ಲಿ ಶ್ರೀ ಕೊರಗಜ್ಜ ದೈವ ಮತ್ತು ಗುಳಿಗರಾಜ ದೈವದ ಹಾಗೂ ಕಲ್ಲುರ್ಟಿ ದೈವದ ಪ್ರತಿಷ್ಠಾಪನೆ ಡಿ. 25 ರಂದು ನಡೆಯಿತು.

ಪ್ರತಿಷ್ಠಾಪನೆಯನ್ನು ಈಶ್ವರ ಮೆಲ್ಕಾರ್ ಅವರ ನೇತೃತ್ವದಲ್ಲಿ ಗಂಗಾಧರ ಚತ್ರಪಾಡಿ ಅವರು ನೆರವೇರಿಸಿದರು.

ನವಶಕ್ತಿ ಭಜನಾ ತಂಡ ನಾಲ್ಕುರು ಇದರ ತಂಡದ ಸದಸ್ಯರು, ಮಕ್ಕಳು ಕುಣಿತ ಭಜನೆ ನಡೆಸಿದರು.

ಹಿನ್ನೆಲೆ ಗಾಯಕರಾಗಿ ರಮೇಶ್ ಮೆಟ್ಟಿನಡ್ಕ ಸಹಕರಿಸಿದರು.

ಈ ಸಂದರ್ಭದಲ್ಲಿ ಮನೆಯ ಯಜಮಾನಿ ಶ್ರೀಮತಿ ಬಾಗಿ,
ದೈವಗಳ ಮುಖ್ಯ ಸೇವಾಕತೃ ಗಂಗಾಧರ ಚತ್ರಪಾಡಿ, ಸೇವಾ ಸಮಿತಿಯ ಅಧ್ಯಕ್ಷ ಭರತ್ ಬೆಳ್ಳಿಪಾಡಿ, ಕಾರ್ಯದರ್ಶಿ ಸುರೇಶ್ ಛತ್ರಪಾಡಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಊರಿನ ನಾಗರಿಕರು ಉಪಸಿತರಿದ್ದರು.

ಇನ್ನು ಮುಂದಿನ ದಿನಗಳಲ್ಲಿ ಪ್ರತಿ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯಲಿರುವುದು.

ವರದಿ.ಡಿ.ಹೆಚ್