ಜ.21 ಮತ್ತು 22 ರಂದು ಸುಳ್ಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ

0

ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2022-23ನೇ ಸಾಲಿನ ಯುವಜನ ಮೇಳವು ಈ ಬಾರಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಮಂಡಳಿಯ ರಂಗಮಂದಿರದಲ್ಲಿ 2023 ರ ಜನವರಿ 21 ಮತ್ತು 22 ರಂದು ನಡೆಯಲಿದೆ.

2 ವರ್ಷಗಳಿಂದ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಯುವಜನ ಮೇಳ ಮತ್ತೆ ಆರಂಭಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ತಾಲೂಕು ಮಟ್ಟದ ಯುವಜನ ಮೇಳಗಳು ರದ್ದುಗೊಂಡಿದ್ದು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಈ ಬಾರಿ ಸುಳ್ಯದಲ್ಲಿ ಯುವಜನ ಮೇಳ ನಡೆಯಲಿರುವುದರಿಂದ ತಾಲೂಕಿನ ಯುವಕ/ಯುವತಿ ಮಂಡಲಗಳಿಗೆ ಭಾಗವಹಿಸಲು ಉತ್ತಮ ಅವಕಾಶ ಲಭಿಸಿದೆ.
ವಿವಿಧ ಸ್ಪರ್ಧೆಗಳ ಜೊತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು 2 ದಿನಗಳ ವಿಜೃಂಭಣೆಯಿಂದ ಯುವಜನ ಮೇಳ ಸುಳ್ಯದಲ್ಲಿ ನಡೆಯಲಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಯುವಕ /ಯುವತಿ ಮಂಡಲಗಳು ಯುವಜನ ಮೇಳದಲ್ಲಿ ಭಾಗವಹಿಸಲಿದ್ದು ತಾಲೂಕಿನ ಯುವಕ/ಯುವತಿ ಮಂಡಲಗಳು ಈಗಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ ನಡೆಸುವಂತೆ ಸೂಚಿಸಲಾಗಿದೆ..ಆಗಮಿಸುವ ಎಲ್ಲ ಸ್ಪರ್ಧಿಗಳಿಗೆ ಊಟೋಪಚಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.ವಿಜೇತರಿಗೆ ಆಕರ್ಷಕ ನಗದು ಬಹುಮಾನವನ್ನು.ಕೂಡ ನೀಡಲಾಗುತ್ತದೆ.
ತಾಲೂಕಿನ ಯುವಕ/ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಯುವಜನ ಸಂಯುಕ್ತ ಮಂಡಳಿ ತಿಳಿಸಿದೆ.