ಕೆವಿಜಿ ಸುಳ್ಯ ಹಬ್ಬ : ಆರು ಮಂದಿಗೆ ಕೆವಿಜಿ ಯುವ ಸಾಧಕ ಪ್ರಶಸ್ತಿ ಪ್ರದಾನ

0

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಸುಳ್ಯ ಹಬ್ಬದ ಪ್ರಥಮ ದಿನದ ಕಾರ್ಯಕ್ರಮ ದ.25 ರಂದು ನಡೆದು ಯುವ ಸಾಧಕರಾದ ಸಚಿನ್ ಪ್ರತಾಪ್(ಕ್ರೀಡೆ), ಡಾ.ಕುಶ್ವಂತ್ ಕೋಳಿಬೈಲ್(ವೈದ್ಯಕೀಯ), ಸಂತೋಷ್ ಕೊಡೆಂಕಿರಿ(ಚಿತ್ರರಂಗ, ಮಂಜುನಾಥ ಬಂಗ್ಲೆಗುಡ್ಡೆ(ಸಾಂಸ್ಕೃತಿಕ), ಭವ್ಯಶ್ರೀ ಕುಲ್ಕುಂದ(ಯಕ್ಷಗಾನ), ಜಿತೇಂದ್ರ ಎಂ.ಟಿ.(ವ್ಯವಹಾರ) ಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ವಹಿಸಿದ್ದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಸನ್ಮಾನ ನೆರವೇರಿಸಿದರು. ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ವಿ.ಚಿದಾನಂದರು ಮುಖ್ಯ ಅತಿಥಿಯಾಗಿದ್ದರು.
ಸಮಿತಿಯ ಕಾರ್ಯದರ್ಶಿ ಹರೀಶ್ ಉಬರಡ್ಕ, ಖಜಾಂಚಿ ಆನಂದ ಗೌಡ ಕಂಡಿಗ ಉಪಸ್ಥಿತರಿದ್ದರು.