ರಂಗ ಮಯೂರಿ‌ ಕಲಾ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಕರ್ನಾಟಕ ರಾಜ್ಯ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಮೈಸೂರು ಇದರ ವತಿಯಿಂದ ರಾಜ್ಯಮಟ್ಟದ
ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್ 2022 ಡ್ಯಾನ್ಸ್ ಸ್ಪರ್ಧೆ ಮೈಸೂರಿನ ಜೆ.ಕೆ. ಗ್ರೌಂಡ್ ನ ಎಂಎಂಸಿ ಆಡಿಟೋರಿಯಂ ಡಿಸೆಂಬರ್ 25 ರಂದು ನಡೆಯಿತು.


ಸ್ಪರ್ಧೆಯಲ್ಲಿ
ಸುಳ್ಯದ ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಹಾಗೂ ಎರಡು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕ ಗಳಿಸಿಕೊಂಡು ಚೆನ್ನೈನಲ್ಲಿ ನಡೆಯುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಸ್ತ್ರೀಯ ನೃತ್ಯದಲ್ಲಿ ಸನಿಹ ಶೆಟ್ಟಿ ಸುಳ್ಯ ಪ್ರಥಮ, 9 ವರ್ಷ ವಯೋಮಿತಿಯ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಾಪ್ತಿ ಎ.ಆರ್, ಚಕ್ಷು ಗೌಡ, ಕಾರುಣ್ಯ,ಮನ್ವಿತ್, ಮೌರ್ಯ,ಜನ್ಯ,ವಿನೀಶಾ ಅಹನಾ, ಮನಸ್ವಿ ಪಿ.ಎಂ, ಕೃತಿಕಾ ತಂಡ ಬೆಳ್ಳಿ ಪದಕದೊಂದಿಗೆ ದ್ವಿತೀಯ ಸ್ಥಾನ,
15 ವರ್ಷ ವಯೋಮಿತಿಯ ಕಪಲ್ ಡ್ಯಾನ್ಸ್ ನಲ್ಲಿ ಸಿಂಚನಾ ಎನ್.ಪಿ ಹಾಗೂ ಸನಿಹ ಶೆಟ್ಟಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ,
12 ವರ್ಷ ವಯೋಮಿತಿಯ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ನಲ್ಲಿ ಖುಷಿ ಮೆತ್ತಡ್ಕ, ಶಾರ್ವರಿ, ಸಮೃದ್ಧಿ, ಭೂಷಿತ, ಕಿಶನ್ , ಇಶಾನ್, ಲಕ್ಷ್ಯ, ಮಾನ್ವಿ, ದೀಕ್ಷಾ, ತಂಡ ಕಂಚಿನ ಪದಕ ಹಾಗೂ ಹದಿನೈದು ವರ್ಷದೊಳಗಿನ ಫ್ರೀ ಸ್ಟೈಲ್ ವಿಭಾಗದಲ್ಲಿ

ಶ್ರೇಯಾ, ಯಜ್ಞ, ತನಿಶ್ ಅಡ್ತಲೆ, ಐಶಾನ್ಯ, ಸನಿಹ ಶೆಟ್ಟಿ ಸಿಂಚನ ಎನ್.ಪಿ. ತಂಡವು ಬೆಳ್ಳಿಯ ಪದಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಇದರೊಂದಿಗೆ ಸುಳ್ಯ ರಂಗಮಯೂರಿ ಕಲಾಶಾಲೆಯ ಡ್ಯಾನ್ಸ್ ಸಹಭಾಗಿತ್ವದ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ಇವರ ಜೊತೆಯಾಗಿ ಸಮಗ್ರ ಚಾಂಪಿಯನ್ ಶಿಪ್ ನ್ನು ಮುಡಿಗೇರಿಸಿದರು.
ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಡ್ಯಾನ್ಸ್ ನಿರ್ದೇಶಕರಾದ ವಿನೋದ್ ಕರ್ಕೇರ, ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್. ರಾವ್, ಪೃಥ್ವಿ ನಾಯಕ್ ಉಪಸ್ಥಿತರಿದ್ದರು.