ಡಾIಕುರುಂಜಿ ದಿ.ವೆಂಕಟರಮಣ ಗೌಡರವರ 94ನೇ ಹುಟ್ಟುಹಬ್ಬ ಹಾಗೂ ಡಾ. ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

0

ಆದಿದ್ರಾವಿಡ ಯುವ ವೇದಿಕೆ ರಿ.ದಕ್ಷಿಣ ಕನ್ನಡ ಜಿಲ್ಲೆ,ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ರಿ., ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಇದರ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಶಾಖೆ ಮತ್ತು ಮಂಗಳೂರು ಸರಕಾರಿ ಲೇಡಿಗೊಶನ್ ಆಸ್ಪತ್ರೆ ಇದರ ಸಹಯೋಗದಲ್ಲಿ ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ದಿ. ವೆಂಕಟರಮಣ ಗೌಡರ 94ನೇ ಹುಟ್ಟುಹಬ್ಬ, ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 26 ರಂದು ಸುಳ್ಯ ವರ್ತಕ ಸಮುದಾಯ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗಿರತಿ ಮುರುಳ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಆರ್ ಕೆ ನಾಯರ್ ರವರಿಗೆ ಜಂಟಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆದಿ ದ್ರಾವಿಡ ಯುವ ವೇದಿಕೆ ಅಧ್ಯಕ್ಷ ರಾಮಚಂದ್ರ ಬಿ ಕೆ ಕೊಯ್ಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ಕೆಎಂ ಮುಸ್ತಫಾ ಜನತಾ, ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿಎಸ್ ಗಿರೀಶ್, ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ತಿಪ್ಪೇಶಪ್ಪ, ಆದಿ ದ್ರಾವಿಡ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಸತೀಶ್ ಬಿಳಿಯಾರು, ರೆಡ್ ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿ ಡಾ. ಜೆ ಎನ್ ಭಟ್, ರೆಡ್ ಕ್ರಾಸ್ ಮುಖ್ಯಸ್ಥ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.


ರಕ್ತದಾನ ಶಿಬಿರದಲ್ಲಿ ಸಂಘಟನೆಯ ಕಾರ್ಯಕರ್ತರು, ಸ್ಥಳೀಯ ನೂರಾರು ದಾನಿಗಳು ರಕ್ತದಾನವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಕಾರ್ಯಕ್ರಮ ಸಂಯೋಜನೆ ಮಾಡಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಸುಳ್ಯ ವರ್ತಕರ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ ಸಹಕರಿಸಿದರು.