ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಕಲಾವಿದರ ತಂಡ ರಚನೆಗಾಗಿ ಆಸಕ್ತ ಉದಯೋನ್ಮುಖ ಕಲಾವಿದರಿಗೆ ಆಹ್ವಾನ

0

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಕಳಂಜ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಯೋಜಿಸುತ್ತಿದ್ದು ಇದೀಗ ಉದಯೋನ್ಮುಖ ಕಲಾವಿದರನ್ನು ಒಂದು ಗೂಡಿಸಿ ವಿವಿಧ ತಂಡಗಳನ್ನು ರಚಿಸಿ‌ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರದರ್ಶನವನ್ನು ನೀಡುವ ತನ್ನದೇ ಆದ ಗುರಿ ಹೊಂದಿದೆ. ನಿನಾದ ದಲ್ಲಿ ನೋಂದಾಯಿಸಿಕೊಂಡ ಸಂಗೀತ, ನೃತ್ಯ ಹಾಡು ಮತ್ತು ನಾಟಕ, ಯಕ್ಷಗಾನದಲ್ಲಿ ಆಸಕ್ತಿ ಇರುವ ಉದಯೋನ್ಮುಖ ಕಲಾವಿದರಿಗೆ ಖ್ಯಾತ ಕಲಾವಿದರಿಂದ ತರಬೇತಿ ಕೊಡಿಸಿ ಅವರಿಗೆ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಅವಕಾಶ ದೊರೆಯುವಂತೆ ಮಾಡುವುದು ಇದರ ಉದ್ದೇಶ.
ಆಸಕ್ತ ಕಲಾವಿದರು ದಿನಾಂಕ 1.01.2023 ರಂದು ಕಳಂಜ ತಂಟೆಪ್ಪಾಡಿಯ ನಿನಾದಕ್ಕೆ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನವರಿಗೆ ಮಾತ್ರ ಇದರಲ್ಲಿ ಅವಕಾಶ ನೀಡಲಾಗುವುದು.
ಮಧ್ಯಾಹ್ನ 2 ರಿಂದ 2.45 ರ ವರೆಗೆ ನೋಂದಾವಣೆ ನಡೆಯುವುದು. 3 ರಿಂದ ಖ್ಯಾತ ಗಾಯಕ ಮತ್ತು ನಿರ್ದೇಶಕ ರಾಜಗುರು‌ ಹೊಸಕೋಟೆ ಹಾಗೂ ರಂಗನಿರ್ದೇಶಕಿ ಶ್ರೀಮತಿ ನಯನ ಸೂಡ ಅವರ ಜೊತೆಗೆ ಪರಸ್ಪರ ಕಾರ್ಯಕ್ರಮವಿರುತ್ತದೆ.
ಸಂಜೆ 4 ರಿಂದ 5 ರವರೆಗೆ ರಾಜ್ ಗುರು‌ ಮತ್ತು ತಂಡ ದಿಂದ ರಂಗಗೀತೆ, 5.30 ರಿಂದ “ಬಾಬು ಮಾಸ್ಟರ್ ನೆನಪು” ಮತ್ತು 6.30 ರಿಂದ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಪಾವಂಜೆ ಮೇಳದಿಂದ “ನಾಗಸಂಜೀವನ” ಯಕ್ಷಗಾನ ನಡೆಯುವುದು.
ವಿವರಗಳಿಗೆ 9958697823 ( ವಸಂತ ಶೆಟ್ಟಿ ಬೆಳ್ಳಾರೆ ) ಅಥವಾ 9448625463 ( ಪ್ರಮೋದ್ ಕುಮಾರ್ ರೈ ) ಯವರನ್ನು ಸಂಪರ್ಕಿಸಬಹುದೆಂದು ನಿನಾದ ಸಂಲಕರಾದ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.