4G ಕ್ರಿಕೆಟರ್ಸ್ ದುಗ್ಗಲಡ್ಕ ವತಿಯಿಂದ ಸುಳ್ಯ ‌ಕ್ರಿಕೆಟ್ ಹಬ್ಬ, ಪ್ರಥಮ ಡಿ ಸ್ಪೋರ್ಟ್ಸ್ ಸುಳ್ಯ, ದ್ವಿತೀಯ ಯುವ ಶಕ್ತಿ ನಾವೂರು

0

4G ಕ್ರಿಕೆಟರ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ ‘ಸುಳ್ಯ ಕ್ರಿಕೆಟ್ ಹಬ್ಬ’ ಡಿ. 24 ಹಾಗೂ 25 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲ್ ಮೈದಾನದಲ್ಲಿ ನಡೆಯಿತು. ಆಹ್ವಾನಿತ 12 ತಂಡಗಳ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟದಲ್ಲಿ 12 ಐಕಾನ್ ಆಟಗಾರರನ್ನೊಳಗೊಂಡಂತೆ ಎ ಹಾಗೂ ಬಿ ಪೂಲ್ ಗಳಲ್ಲಿ‌ ಪಂದ್ಯಾಟವನ್ನು‌ ಹಮ್ಮಿಕೊಳ್ಳಲಾಯಿತು.


ಪಂದ್ಯಾಟದ ಚಾಂಪಿಯನ್ ಆಗಿ ಡಿ ಸ್ಪೋರ್ಟ್ಸ್ ಸುಳ್ಯ ತಂಡ ಹೊರಹೊಮ್ಮಿ ರೂ 25,000 ನಗದು ಹಾಗೂ 4G ಶಾಶ್ವತ ಫಲಕ‌ ತನ್ನದಾಗಿಸಿಕೊಂಡಿತು.
ರನ್ನರ್ಸ್15,000 ಹಾಗೂ ರನ್ನರ್ಸ್ ಪ್ರಶಸ್ತಿಯನ್ನು ಯುವ ಶಕ್ತಿ ‌ನಾವೂರು ತಂಡ ಪಡೆದುಕೊಂಡಿತು. ಈ ಪಂದ್ಯಾವಳಿಯ ವೈಯುಕ್ತಿಕ
ಪಂದ್ಯ ಶ್ರೇಷ್ಠ ಕಿರಣ್ ದೊಡ್ಡತೋಟ, ಸರಣಿ ಶ್ರೇಷ್ಠ ರಶೀದ್ ದುಗ್ಗಲಡ್ಕ, ಉತ್ತಮ ದಾಂಡಿಗ ಆಸಿಫ್ ಮುಡೂರು,ಉತ್ತಮ ಗೂಟರಕ್ಷಕ ಶಾಕಿರ್ ಕಂಚಿಲ್ಪಾಡಿ, ಉತ್ತಮ ಎಸೆತಗಾರ ಶಿವ ಜಾಲ್ಸೂರು,ಉತ್ತಮ ಕ್ಷೇತ್ರ ರಕ್ಷಕ ಗಣೇಶ್ ಉಬರಡ್ಕ
ಪ್ರಶಸ್ತಿಯನ್ನು ಪಡೆದುಕೊಂಡರು.
ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎಸ್.ಸಂಶುದ್ದೀನ್, ಉದ್ಯಮಿ ಪಿ.ಎ.ಮಹಮ್ಮದ್, ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ ಬಳ್ಳಾರಿ, ಉಬರಡ್ಕ ಗ್ರಾ.ಪಂ.ಸದಸ್ಯ ಅನಿಲ್ ಬಳ್ಳಡ್ಕ ಮೊದಲಾದವರು ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.