ಕುಕ್ಕೆ ಕ್ಷೇತ್ರಕ್ಕೆ ಸ್ವದೇಶಿ ದರ್ಶನ್ ಯೋಜನೆ ಜಾರಿಗೆ ತರಲು ಆದ್ಯತೆ ನೀಡುತ್ತೇನೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದಾಗಿ ನಿರ್ವಹಣೆ ಮತ್ತು ಸ್ಥಿರತೆ ಕಲಿತೆ, ಸುಬ್ರಹ್ಮಣ್ಯದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

0

ಕುಕ್ಕೆ ಕ್ಷೇತ್ರಕ್ಕೆ ಸ್ವದೇಶಿ ದರ್ಶನ್ ಯೋಜನೆ ಜಾರಿಗೆ ತರಲು ಆದ್ಯತೆ ನೀಡುತ್ತೇನೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು. ಅವರು
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಡಿ.26 ರಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೇಷ್ಠವಾದ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆಯನ್ನು ಜಾರಿಗೆ ತರಲು ಉತ್ಸಕಳಾಗಿದ್ದೇನೆ. ದೇವಳದಿಂದ ಈ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳಿಸಿ, ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಈ ಬಗ್ಗೆ ಬಂದರೆ ಖಂಡಿತವಾಗಿಯೂ ಸ್ವದೇಶಿ ದರ್ಶನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಿ.26 ರಂದು ಭೇಟಿ ನೀಡಿದ ಸಚಿವರು ಶ್ರೀ ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಎಂಬ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಾಂಜಲಿ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ದೇವಾಲಯಗಳು ಶ್ರದ್ಧಾಕೇಂದ್ರಗಳು ಇಲ್ಲಿ ನಂಬಿಕೆಯ ಮೂಲಕ ನಾವು ಆರಾಧನೆ ಮಾಡುತ್ತೇವೆ.ಇಲ್ಲಿ ಅವರವರ ನಂಬಿಕೆ ಮತ್ತು ಆರಾಧನೆಗಳನ್ನು ನಾವು ಗೌರವಿಸಬೇಕು. ಪ್ರತಿ ಧರ್ಮದ ಆಚರಣೆಗಳನ್ನು ನಾವು ಗೌರವಿಸಬೇಕು ಎಂದರು.

ದೇವಸ್ಥಾನಗಳು ನಂಬಿಕೆಯ ತಾಣಗಳಾಗಿವೆ.ಶ್ರೀ ದೇವರ ಆಶೀರ್ವಾದವು ಬದುಕು ಬದಲಾಯಿಸುವ ಬೆಳಕಾಗಿದೆ.ಭಕ್ತರು ತಮ್ಮ ಇಚ್ಚೆಯ ಮೂಲಕ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಅಭೀಷ್ಠೆಗಳನ್ನು ಈಡೇರಿಸುತ್ತಾರೆ. ಅದೇ ರೀತಿ ನಾನು ಕೂಡಾ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸೇವೆ ನೆರವೇರಿಸಿದ್ದೇನೆ. ನಾನು ಈ ಹಿಂದಿನಿಂದ ಇಲ್ಲಿಗೆ ಬರುವ ಚಿಂತನೆ ಮಾಡಿದ್ದೆ ಇಂದು ಅದು ಈಡೇರಿದೆ.ಇದು ದೇವರ ಸಂಕಲ್ಪವಾಗಿದೆ. ಕ್ಷೇತ್ರ ಭೇಟಿಯಿಂದ ತುಂಬು ಸಂತಸವಾಗಿದೆ ಎಂದು ಸಚಿವರು ತಿಳಿಸಿದರು.

ಕ್ಷೇತ್ರಕ್ಕೆ ಬಂದಾಗ ಶ್ರೀ ದೇವಳದಿಂದ ನಡೆಸಲ್ಪಡುವ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಶ್ರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷರು ವಿನಂತಿಸಿದ್ದರು.ಆ ಪ್ರಕಾರ ಗ್ರಾಮೀಣ ಯುವ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶ ದೊರಕಿದೆ.ಆಧುನಿಕ ಭಾರತ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ.ಆಧುನಿಕ ಭಾರತವು ಜಗತ್ತಿನಲ್ಲಿ ಹೆಮ್ಮೆಯ ದೇಶವಾಗಿದೆ ನೀಡಿದೆ.ಭಾರತದ ನಾಗರೀಕತೆಯು ಅಧಮ್ಯವಾದುದು.ಈ ಮೂಲಕ ನಮ್ಮ ಪೂರ್ವಜರು ಕೊಟ್ಟ ಜ್ಞಾನವು ಇಡೀ ಪ್ರಪಂಚಕ್ಕೆ ದಾರಿದೀಪವಾಗಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಜ್ಞಾನವನ್ನು ಆಧುನಿಕ ಯುವ ಜನಾಂಗವು ಪಡೆಯುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು
ಒಬ್ಬ ಒಬ್ಬ ನಟಿಯಾಗಿ ಮತ್ತು ರಾಜಕಾರಣಿಯಾಗಿ ತಾವು ತಮ್ಮ ಕರ್ತವ್ಯವನ್ನು ಯಾವ ರೀತಿ ನಿಭಾಯಿಸಿದ್ದೀರಿ ? ಎಂಬುದಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಳು
ಅದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ನಾನು ರಾಷ್ಟ್ರೀಯ ಯ ಸ್ವಯಂಸೇವಕ ಸಂಘದ ಕಾರ್ಯಕರ್ತೆ ಇದಲ್ಲದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯೆಯಾಗಿ ನಾನು ಸೇವೆ
ಸಲ್ಲಿಸಿದ್ದೇನೆ.ಇವುಗಳು ನಮಗೆ ಜೀವನ ಮೌಲ್ಯ ಮತ್ತು ದೇಶ ಸೇವೆಗೆ ಪ್ರೇರಣೆ ನೀಡುತ್ತದೆ.ಅದೇ ರೀತಿ ನಟಿಯಾಗಿದ್ದಾಗಲೂ ನಾನು ಸಂಘದ ಮತ್ತು ವಿದ್ಯಾರ್ಥಿ ಪರಿಷತ್‌ನ ಸ್ವಯಂ ಸೇವಕಳಾಗಿ ಸೇವೆ ಸಲ್ಲಿಸುತ್ತಿದೆ.ಇವುಗಳು ನನಗೆ ಕರ್ತವ್ಯ ನಿರ್ವಹಣೆಗೆ ವಿಶೇಷ ಕೊಡುಗೆ ಮತ್ತು ಸ್ಥಿರ ಮನಸ್ಥಿತಿಯನ್ನು ನೀಡಿತ್ತು.ದೇಶ ಸೇವೆಯ ಕೈಂಕರ್ಯವನ್ನು ನಡೆಸಲು ಪ್ರೇರಣೆ ನೀಡಿತ್ತು. ಸಂಘವು ನನಗೆ ದೇಶದ ಜನತೆಯ ಸೇವೆ ನಡೆಸಲು ಪ್ರಧಾನ ಸ್ಪೂರ್ತಿಯಾಗಿತ್ತು.ಬಳಿಕ ರಾಜಕಾರಣೀಯಾಗಿ ದೇಶದ ಜನತೆಯ ಸೇವೆಯನ್ನು ನೆರವೇರಿಸುತ್ತಾ ಬಂದೆ. ಪರೋಪಕಾರ, ದೇಶ ಸೇವೆ ಮತ್ತು ಜನತಾ ಸೇವೆಯ ಮಹತ್ವವನ್ನು ಆರ್‌ಎಸ್‌ಎಸ್‌ನಿಂದ ಕಲಿತುಕೊಂಡೆ ಎಂದು ನುಡಿದರು.
ಆರಂಭದಲ್ಲಿ ನಾನು ಪತ್ರಕರ್ತೆಯಾಗಿ ಕೆಲಸ ಆರಂಭಿಸಿದೆ.ಆ ಕಾಲದಲ್ಲಿ ಮಹಿಳೆಯರು ಮಾದ್ಯಮ ಕ್ಷೇತ್ರದಲ್ಲಿ ದುಡಿಯುವುದು ತಂಬಾ ದುಸ್ತರವಾಗಿತ್ತು.ಅದರಲ್ಲೂ ಬಡ ಮಹಿಳೆಯರು ಮಾದ್ಯಮ ಕ್ಷೇತ್ರಕ್ಕೆ ಬರುವುದು ಒಂದು ಸವಾಲಾಗಿತ್ತು.ತುಂಬಾ ಬಡವಳಾಗಿದ್ದ ನಾನು ಆ ಕ್ಷೇತ್ರದಲ್ಲಿ ಛಲದಿಂದ ಕರ್ತವ್ಯ ನಿರ್ವಹಿಸಿದೆ.ಆ ಕಾಲದಲ್ಲಿ ನನ್ನ ಮದುವೆಗೆ ನನ್ನ ಮನೆಯವರು ಕೇವಲ ೧೫೦ ರೂ ವ್ಯಯಿಸಿದ್ದರು.ಅದಕ್ಕೆ ನಮ್ಮ ಮನೆಯಲ್ಲಿ ಕಷ್ಟವಿತ್ತು.ನಾನು ಮಾದ್ಯಮ ಕ್ಷೇತ್ರದಲ್ಲಿ ಪ್ರಥಮವಾಗಿ ಕೆಲಸ ಆರಂಭಿಸಿದೆ.ಪತ್ರಕರ್ತೆಯಾಗಿ ನಾನು ಪಡೆದ ಆರಂಭದ ತಿಂಗಳ ವೇತನ ಕೇವಲ ೨೦೦ ರೂ ಆಗಿತ್ತು.ಆದರೆ ಹಣ ಮತ್ತು ಸಂಪತ್ತು ಇಲ್ಲದಿರುವುದು ನನ್ನ ಸಾಧನೆಗೆ ಮುಳುವಾಗಲಿಲ್ಲ. ಯಾಕೆಂದರೆ ಛಲ ಮತ್ತು ಗುರಿಯಿಂದ ಮುನ್ನಡೆದೆ.ಅದೇ ರೀತಿ ಆಧುನಿಕ ಯುಗದಲ್ಲೂ ಮಹಿಳೆಯರು ಸವಾಲನ್ನು ಮೆಟ್ಟಿ ನಿಂತು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ನಾನು ೨೦೦೧-೨೦೦೨ನಲ್ಲಿ ಡಬ್ಲೂಎಚ್‌ಒನ ಓಆರ್‌ಎಸ್ ಕಾರ್ಯಕ್ರಮದ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೆ. ಆಗ ನಾನು ೨೪ ವರ್ಷದವಳಾಗಿದ್ದೆ.೨೦೦೩ರಲ್ಲಿ ಬಿಜೆಪಿಗೆ ಬಂದೆ.ಬಳಿಕ ಮಹರಾಷ್ಟçದ ಯುವ ಮೋರ್ಚಾದ ಪ್ರಧಾನಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ. ಬಳಿಕ ೫ ಬಾರಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಪಕ್ಷದ ಕಾರ್ಯ ನೆರವೇರಿಸಿದೆ.೨ ಬಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಒಂದು ಬಾರಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ, ಒಂದು ಬಾರೀ ಬಿಜೆಪಿ ರಾಷ್ಟಿçÃಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ, ೩ ಬಾರಿ ಎಂಪಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ.ಈ ಮೂಲಕ ಭಾರತೀಯ ನಾರಿ ಕರ್ತವ್ಯಪರತೆಯಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು ಎಂಬುದನ್ನು ತೋರಿಸಿಕೊಟ್ಟಿದ್ದೇನೆ ನುಡಿದರು.
ಕನ್ನಿಕಾ ಕಳಿಗೆ ಅವರು ಮಹಿಳೆಯರಿಗೆ ಏನಾದರೂ ಸಮಸ್ಯೆಯಾದರೆ ಸಂಪರ್ಕ ಸಾಧಿಸಿ ಅದರಿಂದ ಮುಕ್ತಿ ಪಡೆಯಲು ಸರಕಾರದಿಂದ ಯಾವುದಾರೂ ಯೋಜನೆ ಇದೆಯಾ?
ನನ್ನ ಮೈಲ್ ಐಡಿ ಮತ್ತು ನನ್ನ ಪೋನ್ ನಂಬರ್ ನನ್ನ ವೆಬ್ ಸೈಟ್‌ನಲ್ಲಿ ಇದೆ.ಅದಕ್ಕೆ ಕರೆ ಮಾಡಿದರೆ ತಕ್ಷಣ ಸ್ಪಂಧಿಸುತ್ತೇನೆ.ಮಹಿಳೆಯರು ತಮಗೆ ಸಂಕಷ್ಠ ಎದುರಾದಾಗ ಹೆಲ್ಪ್ ಲೈನ್ ಸಂಖ್ಯೆ ೧೦೯೮ಗೆ ಕರೆ ಮಾಡಬಹುದು ಇದಕ್ಕೆ ಸಮರ್ಪಕವಾಗಿ ಸ್ಪಂಧನೆ ನೀಡಲಾಗುತ್ತದೆ.ಭಾರತದ ಎಲ್ಲಾ ಜಿಲ್ಲೆಗಳ ಕೇಂದ್ರಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಕೇಂದ್ರಗಳನ್ನು ಕೇಂದ್ರ ಸರಕಾರವು ಆರಂಭಿಸಿದೆ.ಈಗಾಗಲೇ ಸುಮಾರು ೭೦೦ಕ್ಕೂ ಅಧಿಕ ಕೇಂದ್ರಗಳು ದಿನದ ೨೪ ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ನಮ್ಮ ಮನಸ್ಸಿನ ಒತ್ತಡ ಹಾಗೂ ಕೋಪವನ್ನು ಯಾವ ರೀತಿ ಕಮ್ಮಿ ಮಾಡುವುದು ಎಂದು ಪ್ರಶ್ನಿಸಿದ್ದರು. ಇದಕ್ಕೆ ಒಂದೇ ಪರಿಹಾರ ಬೆಳಗ್ಗೆ ಎದ್ದು ಯೋಗ ಮಾಡುವುದೇ ಒಂದು ಪರಿಹಾರ ಎಂದು ಪ್ರತಿಕ್ರಿಸಿದರು. ವಿದ್ಯಾರ್ಥಿನಿಯರುಗಳು ಹಾಗೂ ಮಕ್ಕಳಿಗೆ ಯಾವುದೇ ಸಮಸ್ಯೆ ಆದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದೇ ಎಂದು ಪ್ರಶ್ನೆ ಬಂದಾ ಖಂಡಿತವಾಗಿಯೂ ಸಂಪರ್ಕಿಸಬಹುದು. ನಿಮ್ಮ ಸಮಸ್ಯೆಗೆ ಸ್ಪಂದಿಸಲು ಸರ್ಕಾರವಿದೆ. ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿದರೂ ೫ ನಿಮಿಷದಲ್ಲಿ ಪ್ರತಿಕ್ರಿಯೆ ಲಭ್ಯವಿದೆ. ೧೧ ವರ್ಷದಲ್ಲಿ ೨೫೦ಮಿಮಿ ೨೨ ಕೋಟಿ ಕರೆ ಬಂದಿದೆ. ನಿಮ್ಮ ಸಮಸ್ಯೆ ಪರಿಹಾರವಿದೆ ಅಥವಾ ದೇವಸ್ಥಾನದ ವತಿಯಿಂದ ನನ್ನನ್ನು ಸಂಪರ್ಕಿಸಿದರೆ ನಾನು ಸ್ಪಂಧಿಸುವುದಾಗಿ ತಿಳಿಸಿದರು. ಎಂದರು. ಕೋವಿಡ್ ಸಮಯ ಮತ್ತು ಭೂಕಂಪನ ಸಮಯ ಯುವಜನೆ ಅದ್ಭುತವಾಗಿ ಕೆಲಸ ಮಾಡಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪ್ರತಿಯೋರ್ವರಿಗೂ ಅವರದ್ದೇ ಧರ್ಮವನ್ನು ಅವರದ್ದೇ ಆದ ಅಧಾರದಲ್ಲಿ ಪಾಲಿಸುವ ಸ್ವಾತಂತ್ರ‍್ಯ ಇದೆ ಎಂದರು.

ಭಾರತ ಸರಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಪ್ರಥಮ ಮಹಿಳೆ ನಾನು ಎಂಬುದು ಸತ್ಯ.ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಾವು ಶೈಕ್ಷಣಿಕ ನೀತಿಯನ್ನು ತಯಾರಿಸಿದ್ದೆವು.ಈ ಮೂಲಕ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಯೋಜನೆ ಮಾಡಲಾಗಿತ್ತು.ಅಲ್ಲದೆ ೨ ಲಕ್ಷಕ್ಕೂ ಅಧಿಕ ಶೈಕ್ಷಣಿಕ ಮಂಡಳಿಗಳನ್ನು ರಚಿಸಲಾಗಿತ್ತು.ಪ್ರತಿ ಜಿಲ್ಲೆಯಲ್ಲಿ ಕೂಡಾ ಶೈಕ್ಷಣಿಕ ಮಂಡಳಿಯನ್ನು ನಿರ್ಮಿಸಲಾಗಿತ್ತು.ಈ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ವಿಶೆಷ ಕಾಳಜಿ ವಹಿಸಲಾಗಿತ್ತು ಎಂದು ನುಡಿದರು.
ಅಲ್ಲದೆ ನೂತನವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.ಇಡೀ ಭಾರತಕ್ಕೆ ಒಂದೇ ತೆರನಾದ ಶಿಕ್ಷಣ ವ್ಯವಸ್ಥೆ ಹೊಂದಲು ಇದು ಸಹಕಾರಿಯಾಗಿದೆ.ಅಲ್ಲದೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಇದು ಅನುಕೂಲಕರವಾಗಿದೆ.ಮಾತೃಭಾಷಾದಲ್ಲಿ ಶಿಕ್ಷಣ ಪಡೆಯುವುದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನ ದೊರಕುತ್ತದೆ. ರಾಷ್ಟ್ರೀಯ ಶಿಕ್ಷಣ ಪದ್ದತಿಯಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಕೂಡಾ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ.ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಪ್ರಥಮ ರಾಜ್ಯವಾಗಿದೆ. ಈ ದಿಸೆಯಲ್ಲಿ ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ನೂತನವಾದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎಲ್ಲಾ ಭಾರತೀಯರು ಮೆಡಿಕಲ್, ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣ ಪಡೆಯಲು ಹೆಚ್ಚಿನ ಆಧ್ಯತೆ ದೊರಕಿದೆ.ಅಲ್ಲದೆ ಇಸ್ರೋದಂತಹ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಮತ್ತು ಬಾಹ್ಯಾಕಾಶದ ಬಗ್ಗೆ ಅಧ್ಯಾಯನ ಮಾಡಲು ವಿಫುಲ ಅವಕಾಶ ದೊರಕಿದೆ.ಅಲ್ಲದೆ ಸಾಂಸ್ಕೃತಿಕ ಮತ್ತು ಸಂಸ್ಕಾರಯುತ ಶಿಕ್ಷಣ ಪಡೆಯಲು ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ.ಮಹಿಳೆ ಮತ್ತು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಪಡೆಯಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಿದೆ.ಎಂದು ನುಡಿದರು.
ವಿದ್ಯಾರ್ಥಿ ಹರೀಶ್ ಕುಮಾರ್ ಅವರು ಮುಂದಿನ ವರ್ಷ ಭಾರತದಲ್ಲಿ ಜಿ೨೦ ಸಮ್ಮೇಳನ ಭಾರತದಲ್ಲಿ ನಡೆಯಲಿದೆ.ಇದರಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯದ ಬಗ್ಗೆ ಭಾರತ ತೆಗೆದುಕೊಳ್ಳುವ ನಿಲುವು ಏನು?
ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿಗಳು ವಸುದೇವ ಕುಟುಂಬಕ ಎಂಬ ಧ್ಯೇಯ ವ್ಯಾಖ್ಯೆಗೆ ತಕ್ಕುದಾಗಿ ನಡೆಯುವವರು.ಇದನ್ನು ಅವರು ಅನುಸರಿಸುತ್ತಾ ಬಂದಿದ್ದಾರೆ.ಮಹಿಳೆಯ ಸಾಮಾಜಿಕ ಉತ್ಥಾನಕ್ಕಾಗಿ ಬೇಕಾದ ಎಲ್ಲಾ ಯೋಜನೆಗಳನ್ನು ಭಾರತ ಸರಕಾರ ನಡೆಸಿದೆ.ಪ್ರಧಾನಿಗಳು ಇಂಡೋನೇಷ್ಯಾದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂಬುದಾಗಿ ಕರೆ ನೀಡಿದ್ದರು. ಅದೇ ರೀತಿ ಭಾರತದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೂಡಾ ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯಕ್ಕೆ ಎಲ್ಲಾ ರಾಷ್ಟ್ರಗಳು ಹೆಚ್ಚಿನ ಆಧ್ಯತೆ ನೀಡಬೇಕು ಎಂಬ ಭಾರತದ ನಿಲುವನ್ನು ಪ್ರಸ್ತಾಪಿಸಲಿದೆ. ಮಹಿಳೆಯರಿಗಾಗಿ ಮುದ್ರಾ ಯೋಜನಾ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಔದ್ಯಮಿಕ ಕ್ಷೇತ್ರದಲ್ಲಿ ಮಹಿಳೆಯರು ಬಂಡವಾಳ ಹೂಡಲು ಹೆಚ್ಚಿನ ಸಾಲ ಸೌಲಭ್ಯವನ್ನು ಮಹಿಳೆಯರಿಗೆ ಒದಗಿಸುವ ಯೋಜನೆಯನ್ನು ಕೇಂದ್ರ ಸರಕಾರ ಒದಗಿಸಿದೆ.ಈ ಎಲ್ಲಾ ಕಾರಣದಿಂದ ಭಾರತದ ಮಹಿಳೆಯರು ಸಬಲರಾಗಿ ತನ್ನ ಕಾಲ ಮೇಲೆ ತಾನು ನಿಂತು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ.ಈ ವಿಷಯವನ್ನು ಕೂಡಾ ಜಿ೨೦ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಗುತ್ತದೆ.ಎಂದು ನುಡಿದರು.
ನಮಗೆ ಬರುವ ಒತ್ತಡ ಮತ್ತು ಕೋಪ ನಿವಾರಣೆ ಹಾಗೂ ಮನಸಿನ ನೆಮ್ಮದಿಗೆ ಏನು ಮಾಡಬೇಕು ಎಂದು ಕ್ಷೇತ್ರಕ್ಕೆ ಯಾತ್ರಾರ್ಥಿಯಾಗಿ ಬಂದ ಮಹಿಳೆಯೊಬ್ಬರು ಪ್ರಶ್ನಿಸಿದರು..
ಆಧುನಿಕ ಯುಗದಲ್ಲಿ ಯುವ ಜನಾಂಗ ಸೇರಿದಂತೆ ಪ್ರತಿಯೊಬ್ಬರು ಮೊಬೈಲ್ ಪೋನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಇದರಿಂದ ಒತ್ತಡ ಹೆಚ್ಚುತ್ತದೆ.ಆದುದರಿಂದ ಅದರ ಬಳಕೆ ಕಡಿಮೆ ಮಾಡಿ.ಆವಶ್ಯಕತೆ ಇದ್ದಾಗ ಮಾತ್ರ ಅದನ್ನು ಬಳಸಿ. ನಮಗೆ ಬರುವ ಒತ್ತಡ ಮತ್ತು ಕೋಪದ ನಿರ್ಮೂಲನಕ್ಕೆ ಯೋಗಾಸನ ಮದ್ದು.ನಮಗೆ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿವಾರಣೆಗೆ ಯೋಗಾಸನ ಸಂಜೀವಿನಿಯಾಗಿದೆ.ಎಂದು ನುಡಿದರು.
ಯುವ ಜನಾಂಗವು ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.ತಾಂತ್ರಿಕ ಮತ್ತು ವೈಜ್ಞಾನಿಕತೆಗೆಯೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು.ಇದರಿಂದ ದೇಶ ಸೇವೆ ಮತ್ತು ಜನತಾ
ಸೇವೆಯ ಭಾವನೆ ಅಧಮ್ಯವಾಗುತ್ತದೆ.ಸರಕಾರವು ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಬಂಡವಾಳವನ್ನು ಸಾಲದ ರೂಪದಲ್ಲಿ ಕೊಡುವ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಅಗ್ನಿಪಥ್ ಯೋಜನೆಯು ಯುವ ಜನಾಂಗಕ್ಕೆ ದೇಶ ಸೇವೆಗೆ ಪ್ರೇರಣೆ ನೀಡುತ್ತದೆ.ಶಾಲಾ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಉಚಿತವಾಗಿ ನೀಡುವ ಬಗ್ಗೆ ಸಲಹೆ ಬಂದಾಗ ಈಗಾಗಲೇ ಜನ ಔಷಧಿ ಕೇಂದ್ರದಲ್ಲಿ ಒಂದು ರೂ ಗೆ ಅತಿ ಕಡಿಮೆ ಬೆಲೆಗೆ ನ್ಯಾಪ್ಕಿನ್ ಕೊಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ ಟಿ, ಎಸ್ ಎಸ್ ಪಿ ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್ ವೇದಿಕೆಯಲ್ಲಿದ್ದರು. ಪ್ರಾಧ್ಯಾಪಕ ಡಾ. ಗೋವಿಂದ ಎನ್ ಎಸ್ ಸ್ವಾಗತಿಸಿದರು.ವಿದ್ಯಾರ್ಥಿನಿ ಆಶಿತಾ ವಂದಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು.