ಸುಳ್ಯ ಎನ್ನೆoಪಿಯುಸಿಯಲ್ಲಿ ಬಹುಮಾನ ವಿತರಣಾ ಸಮಾರಂಭ

0


ವಿದ್ಯಾರ್ಥಿಗಳು ಬದುಕಿನ ಉನ್ನತಿಗೆ ಬೇಕಾದ ಹೊಸ ವಿಚಾರಗಳನ್ನು ಕಲಿಯಬೇಕು.ಗುರಿ ತಲುಪಲು ಪ್ರಯತ್ನ ಮುಖ್ಯ.ಶಿಕ್ಷಣ ರಂಗ ಇಂದು ಬದಲಾವಣೆಗೆ ಒಳಗಾಗುತ್ತಿದೆ.ನಮ್ಮ ಸಾಮರ್ಥ್ಯ ನಾವೇ ನಿರ್ಧರಿಸಬೇಕು, ಹೆತ್ತವರನ್ನು ಸಂತೋಷಪಡಿಸಲು ನಾವೇ ಆತ್ಮ ವಿಶ್ವಾಸ ತುಂಬಿಸುವ ಕೆಲಸ ಮಾಡಬೇಕು ಎಂದು ಸುಳ್ಯದ ಕೆ ವಿ ಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಯ ಮೈಕ್ರೋ ಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ನಮ್ರತಾ ಕೆ.ಜಿ ಅವರು ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ವೈದ್ಯಕೀಯ ರಂಗದಲ್ಲಿ ಅನೇಕ ಕೋರ್ಸ್ ಗಳು ಇದ್ದು ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಎನ್ನೆoಸಿಯ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಅವರು ದೀಪ ಬೆಳಗಿಸಿ ಮಾತನಾಡಿ ವಿಸ್ತಾರ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗೆ ಬಹಳಷ್ಟು ಅವಕಾಶವಿದ್ದು ವಿದ್ಯಾರ್ಥಿಗಳು ಕೌಶಲ್ಯ ವೃದ್ಧಿಸಿಕೊಂಡು ಸಾಧನೆಗೈಯಬೇಕು.ಆಶಾವಾದಿಗಳಾಗಿ ಮುಂದುವರಿಯಿರಿ ಎಂದು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ಪ್ರಾoಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ,ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ ಮತ್ತು ಸಾವಿತ್ರಿ ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಭಿಜ್ಞಾ,ಅಂಬಿಕಾ ಪ್ರಾರ್ಥಿಸಿದರು.ವಿದ್ಯಾರ್ಥಿ ನಾಯಕ ಧ್ಯಾನ್ ವಿಜಯ್ ಸ್ವಾಗತಿಸಿ, ವಿ.ಕ್ಷೇಮಾಧಿಕಾರಿಗಳಾದ ದಾಮೋದರ ಪಿ ಮತ್ತು ಸಾವಿತ್ರಿ ಕೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಸಾಂಸ್ಕೃತಿಕ ಕಾರ್ಯದರ್ಶಿ ಗೌತಮ್ ಪಿ ವಂದಿಸಿದರು.ಉಪನ್ಯಾಸಕಿಯರಾದ ಬೇಬಿ ವಿದ್ಯಾ ಪಿ.ಬಿ ಮತ್ತು ರತ್ನಾವತಿ ಬಿ ಕಾರ್ಯಕ್ರಮ ನಿರೂಪಿಸಿದರು.