ಬೂಡು ವಾರ್ಡ್ ನಲ್ಲಿ ಬೋರ್ ವೆಲ್ ಕೊರೆಸಿ : ನೀರಿನ ಸಮಸ್ಯೆ ‌ನಿವಾರಿಸಿ, ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ‌ಮನವಿ

0

ಸುಳ್ಯ ‌ನಗರದ ಬೂಡು ವಾರ್ಡ್ ನಲ್ಲಿ ನೀರಿನ ಸಮಸ್ಯೆ ನಿವಾರಿಸಲು ವಾರ್ಡ್ ನಲ್ಲಿ ಬೋರ್ ವೆಲ್ ಕೊರೆಸುವಂತೆ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ನ.ಪಂ. ಮುಖ್ಯಾಧಿಕಾರಿ ಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬೂಡು – ಕೇರ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಪದೇ ಪದೇ ಆಗುತ್ತಿದ್ದು, ವಾರ್ಡ್ ನ ಜನರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಬೂಡು‌ ವಾರ್ಡ್ ನಲ್ಲಿ ಬೋರ್ ವೆಲ್ ಕೊರೆಸಲು ಇರಿಸಿದ ಅನುದಾನದಲ್ಲಿ‌ ಶೀಘ್ರ ಬೋರ್ ವೆಲ್ ಕೊರೆಸಿ ಸಮಸ್ಯೆ ಪರಿಹರಿಸುವಂತೆ ಅವರು ಮನವಿಯಲ್ಲಿ‌ ವಿನಂತಿಸಿಕೊಂಡಿದ್ದಾರೆ.