ಈಶಾನ್ಯ ಬಿ. ಯು. ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ

0

2021 22ನೇ ವರ್ಷದ ವೈದ್ಯಕೀಯ ನೀಟ್ ಪರೀಕ್ಷೆಯಲ್ಲಿ ಕು. ಈಶಾನ್ಯ ಬಿ. ಯು.ರವರು 645 ಅಂಕಗಳಿಸಿ, 5316 ನೇ ಸ್ಥಾನಗಳಿಸಿದ್ದಾರೆ. ಮೆರಿಟ್ ಸೀಟ್ ಪಡೆದ ಈಕೆ ಮಂಗಳೂರಿನ ಪ್ರತಿಷ್ಠಿತ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಪ್ರವೇಶ ಪಡೆದಿದ್ದಾರೆ.


ಈಕೆ ಎಲ್ ಕೆ ಜಿ, ಯು ಕೆ ಜಿ ಹಾಗೂ ಒಂದನೇ ತರಗತಿಯನ್ನು ಗುತ್ತಿಗಾರು ಬ್ಲೆಸ್ಡ್ ಕುರಿಯಕೋಸ್ ಶಾಲೆಯಲ್ಲಿ, ಎರಡನೇ ತರಗತಿಯಿಂದ 10ನೇ ತರಗತಿಯವರೆಗೆ ಮಂಗಳೂರಿನ ಕೆನರಾ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆದು, ಎಸ್ ಎಸ್ ಎಲ್ ಸಿ ಯಲ್ಲಿ ಶೇ. 97.4 ಅಂಕ ಪಡೆದು ಶಾಲೆಗೆ ಪ್ರಥಮ ಹಾಗೂ ಮಂಗಳೂರಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಪಿಯುಸಿ ವಿದ್ಯಾಭ್ಯಾಸವನ್ನು ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪೂರೈಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 97.67 ಅಂಕ ಪಡೆದಿದ್ದಾಳೆ.
ಈಕೆ ಡಾ. ಉಮೇಶ್ ಬಸಗುಳ ಹಾಗೂ ಎಮ್ . ಜಿ. ನವ್ಯ ಮುಳುಗಾಡು ದಂಪತಿಗಳ ಪುತ್ರಿ. ಶನಿವಾರಸಂತೆಯ ಬಸಗುಳ ದಿ. ಬಸವೇ ಗೌಡ ಹಾಗೂ ಶ್ರೀಮತಿ ಚಿನ್ನಮ್ಮ ಬಸವೇಗೌಡ ಹಾಗೂ ದಿ. ಗಂಗಯ್ಯ ವಕೀಲರು ಶ್ರೀಮತಿ ಸರೋಜಾ ಗಂಗಯ್ಯರವರ ಮೊಮ್ಮಗಳು.