ಕಣಕ್ಕೂರು ತರವಾಡು ಮನೆಸ್ಥಾನದ ದೈವಸ್ಥಾನದಲ್ಲಿ ಶ್ರೀ ದೈವ ದೇವರುಗಳ ಧರ್ಮ ನಡಾವಳಿ

0

ಆಲೆಟ್ಟಿ ಗ್ರಾಮದಲ್ಲಿರುವ ಕಣಕ್ಕೂರು ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ದೈವಗಳ ಧರ್ಮ ನಡಾವಳಿ ಹಾಗೂ ಮನೆ ದೈವಗಳ ನೇಮೋತ್ಸವ ಡಿ. 29 ರಿಂದ ಮೊದಲ್ಗೊಂಡು ಡಿ. 31 ರ ತನಕ ಜರುಗಿತು.

ಡಿ. 29 ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆಯು ನಡೆಯಿತು. ಸಂಜೆ ದೀಪಾರಾಧನೆಯಾಗಿ ರಾತ್ರಿ ಶ್ರೀ ರಾಜ್ಯ ದೈವದ ಭಂಡಾರ ತೆಗೆದು ಬಳಿಕ ಶ್ರೀ ವಿಷ್ಣುಮೂರ್ತಿ ಹಾಗೂ ಉಪ ದೈವಗಳ ತೊಡಂಞಲ್ ನಡೆಯಿತು.
ರಾತ್ರಿ ಶ್ರೀ ಕಾರ್ಣವರ್ ದೈವದ ಕೋಲ ನಡೆದು ಅನ್ನ ಸಂತರ್ಪಣೆಯಾಯಿತು. ಬಳಿಕ ಶ್ರೀ ಪೊಟ್ಟನ್ ದೈವದ ಅಗ್ನಿಸೇವೆಯಾಗಿ ಪ್ರಸಾದ ವಿತರಣೆಯಾಯಿತು. ಮರುದಿನ ಪೂರ್ವಾಹ್ನ ಶ್ರೀ ಉಳ್ಳಾಕುಲು ಮತ್ತು ಮಲೆದೈವಗಳ ನೇಮ ನಡೆದ ನಂತರ ಶ್ರೀ ಎರಞಪುಯ ಚಾಮುಂಡಿ ದೈವದ ಕೋಲವಾಗಿ ಬಳಿಕ ಶ್ರೀ ರಕ್ತೇಶ್ವರೀ ದೈವದ ಕೋಲವು ನಡೆಯಿತು. ಮಧ್ಯಾಹ್ನ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಮಧ್ಯಾಹ್ನ ನಂತರ ಶ್ರೀ ರಾಜ್ಯ ದೈವದ ನೇಮವಾಗಿ ಶ್ರೀ ವಿಷ್ಣುಮೂರ್ತಿ ದೈವದ ಕಳಿಯಾಟ ಮಹೋತ್ಸವವಾಗಿ
ಪ್ರಸಾದ ವಿತರಣೆಯಾಯಿತು. ಊರ ಪರ ಊರಿನ ಭಕ್ತಾದಿಗಳು ಆಗಮಿಸಿದ್ದರು.


ಕಣಕ್ಕೂರು ಕುಟುಂಬದ ಹಿರಿಯರಾದ ಕೊರಗಪ್ಪ ಮಾಸ್ತರ್ ಹಾಗೂ ಕುಟುಂಬದ ಸದಸ್ಯರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು.