ಹರಿಹರೇಶ್ವರ ದೇವಸ್ಥಾನದ ಜಾತ್ರೋತ್ಸವ ಪೂರ್ವಭಾವಿ ಸಭೆ

0

ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶೇಷಪ್ಪ ಗೌಡ ಕಿರಿಭಾಗ, ಕಾರ್ಯದರ್ಶಿಯಾಗಿ ಜನಾರ್ದನ ಗುಂಡಿಹಿತ್ಲು

ಹರಿಹರೇಶ್ವರ ದೇವಸ್ಥಾನದ ಜಾತ್ರೋತ್ಸವದ ಪೂರ್ವಭಾವಿ ಸಭೆ ಡಿ.28 ರಂದು ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್‍ ಕುಮಾರ್ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಜಾತ್ರೋತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳ ರಚನೆ ಮಾಡಲಾಯಿತು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಪುನರ್ ರಚನೆಗೊಂಡಿದ್ದು ಅಧ್ಯಕ್ಷರಾಗಿ ಶೇಷಪ್ಪಗೌಡ ಕಿರಿಭಾಗ ಇವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಜನಾರ್ಧನ ಗುಂಡಿಹಿತ್ಲು ಇವರನ್ನು ಆಯ್ಕೆ ಮಾಡಲಾಗಿದೆ.

ಖಜಾಂಜಿಯಾಗಿ ಕಿಶೋರ್ ಕುಮಾರ್ ಕೂಜುಗೋಡು, ಸದಸ್ಯರುಗಳಾಗಿ ಎನ್ ಕೇಶವಮೂರ್ತಿ, ಸತೀಶ್ ಕೂಜುಗೋಡು, ಮೂಕಾಂಬಿಕ ಗುಂಡಿಹಿತ್ಲು, ಸಾಯಿಗೀತಾ ಕೂಜುಗೋಡು, ಹರ್ಷಿಣಿ ಕಟ್ಟೆಮನೆ, ಹಿಮ್ಮತ್ ಕೆ ಸಿ, ನಿತ್ಯಾನಂದ ಭೀಮಗುಳಿ, ಜಯರಾಮ ಕರಂಗಲ್ಲು, ಸೀತಾರಾಮ ಕೆ ಹರಿಹರ, ಪ್ರೇಮ ಕೆದಿಲ ಇವರುಗಳನ್ನು ಆಯ್ಕೆಮಾಡಲಾಗಿದೆ. ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.