ನಾಳೆ ಗುತ್ತಿಗಾರು ಪ್ರೌಢಶಾಲೆಯ ಸುವರ್ಣ ಮಹೋತ್ಸವ

0

ಪ್ರಯೋಗಾಲಯ ಕೊಠಡಿ, ಶಾಲಾ ರಸ್ತೆಯ ಕಾಂಕ್ರೀಟ್ , ಶೌಚಾಲಯ, ಇಂಟರ್ ಲಾಕ್ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲೆಯು ಸುವರ್ಣ ಮಹೋತ್ಸವ ಆಚರಿಸುತಿದ್ದು ಆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಡಿ.31 ರಂದು ಜರುಗಲಿದೆ. ಸುವರ್ಣ ಮಹೋತ್ಸವ ಪ್ರಯುಕ್ತ ಪ್ರಯೋಗಾಲಯ ಕೊಠಡಿ, ಶಾಲಾ ರಸ್ತೆಯ ಕಾಂಕ್ರೀಟ್ , ಶೌಚಾಲಯ, ಇಂಟರ್ ಲಾಕ್ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ.


ಸಂಜೆ 5 ಗಂಟೆಗೆ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಸಚಿವ ಎಸ್ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಯೋಗಾಲಯ
ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಕಾಂಕ್ರೀಟ್ ರಸ್ತೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ಶೌಚಾಲಯ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ. ವಿ ತೀರ್ಥರಾಮ ಇಂಟರ್‌ಲಾಕ್ ಉದ್ಘಾಟಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಮೋಹನ್ ರಾಂ ಸುಳ್ಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಿತ್ಯಾನಂದ ಮುಂಡೋಡಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ವೆಂಕಟ್ ವಳಲಂಬೆ, ಮಾಯಿಲಪ್ಪ ಕೊಂಬೊಟ್ಟು, ಮಂಜುಳಾ ಮುತ್ಲಾಜೆ, ಉಪ ನಿರ್ದೇಶಕ ಸುಧಾಕರ ಕೆ, ಭವಾನಿಶಂಕರ್ ಎನ್, ಮಹದೇವ ಎಸ್.ಪಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ ಬಾಲಕೃಷ್ಣ ಸಿ. ಎಚ್, ಉಮೇಶ್ ಮುಂಡೋಡಿ, ಎಂ. ಆರ್. ಬಾಲಕೃಷ್ಣ, ಪ್ರಿನ್ಸ್ ಐಸಾಕ್ ಅವರುಗಳ ಗೌರವ ಉಪಸ್ಥಿತಿ ಇರಲಿದೆ.
ಬೆಳಗ್ಗೆ ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ ಧ್ವಜಾರೋಹಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ದಯಾನಂದ ಮುತ್ಲಾಜೆ
ವಹಿಸಲಿದ್ದಾರೆ. ಅತಿಥಿಗಳಾಗಿ ಭರತ್ ಮುಂಡೋಡಿ, ನಿವೃತ್ತ ಪ್ರಾಂಶುಪಾಲ ಜಿ. ಉಮ್ಮರ್, ವೆಂಕಪ್ಪ ಗೌಡ ಕೇನಾಜೆ, ರಾಮಚಂದ್ರ ಪಳಂಗಾಯ ಭಾಗವಹಿಸಲಿದ್ದಾರೆ.

ಅಪರಾಹ್ನ ಗಂಟೆ – 1.00 ರಿಂದ
ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಪ್ರತಿಭಾ ಪುರಸ್ಕಾರ ಬಳಿಕ
ಹಿರಿಯ ವಿದ್ಯಾರ್ಥಿಗಳು ಮತ್ತು ಊರ ವಿದ್ಯಾಾಭಿಮಾನಿಗಳಿಂದ
ಮನೋರಂಜನಾ ಕಾರ್ಯಕ್ರಮ ಹಾಗೂ
ಅಮರ ಸಮರ ನಾಯಕ “ಕೆದಂಬಾಡಿ ರಾಮಯ್ಯ ಗೌಡ”
ಎಂಬ ಐತಿಹಾಸಿಕ ನಾಟಕದ ಪ್ರದರ್ಶನ ಇರಲಿದೆ.