ಮುಗುಪ್ಪು ಬಾಬು ಗೌಡರ ಸ್ಮರಣಾರ್ಥ ಅವರ ಮನೆಯವರಿಂದ ಇಂದ್ರಾಜೆ ಶಾಲೆಗೆ ಮೈಕ್ ಸೆಟ್ ಕೊಡುಗೆ

0

ಇತ್ತೀಚಿಗೆ ನಿಧನರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ‌ ನಿರ್ದೇಶಕ ದಿ. ಬಾಬು ಗೌಡ ಮುಗುಪ್ಪು ರವರ ಸ್ಮರಣಾರ್ಥ ಅವರ ಪತ್ನಿ ಬಾಳಿಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಲಲಿತ ಬಾಬು ಗೌಡ ಮುಗುಪ್ಪು ಮತ್ತು ಮಕ್ಕಳು ಇಂದ್ರಾಜೆ ಸ.ಕಿ.ಪ್ರಾ. ಶಾಲೆಗೆ ಮೈಕ್ ಸೆಟ್ ಕೊಡುಗೆಯಾಗಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುವರ್ಣ ಚಂದ್ರಿಕಾ, ಶಿಕ್ಷಕಿಯರಾದ ಶ್ರೀಮತಿ ಮಧುಶ್ರೀ ಮತ್ತು ಶ್ರೀಮತಿ ಲತಾಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕೊಡುಗೆಯನ್ನು ಸ್ವೀಕರಿಸಿದರು.